ಶ್ರೀ ಆದಿಶಕ್ತಿ ದೇವಿಯ ಪುನರ್ ಪ್ರತಿಷ್ಠಾಪನೆ

01MDK06
Published on

ಮಡಿಕೇರಿ:

ಉಡೋತ್ ಮೊಟ್ಟೆಯಲ್ಲಿ ಶ್ರೀ ಆದಿಶಕ್ತಿ ದೇವಿಯ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸ ಜೂ.೭ ರಿಂದ ೯ರ ನಡೆಯಲಿದೆ.

ವೇದಮೂರ್ತಿ ವೇದವ್ಯಾಸ ತಂತ್ರಿಗಳ ಮಾರ್ಗದರ್ಶನದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಏರ್ಪಡಿಸಲಾಗಿದೆ.

ಜೂ.೭ ರಂದು ಬೆಳಿಗ್ಗೆ ೯ ಗಂಟೆಗೆ ಮಹಾಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಗಣಪತಿ ಹೋಮ, ಕಂಕಣ ಬಂಧನ, ಉಗ್ರಾಣ ಪೂಜೆ ನಡೆಯಲಿದ್ದು, ಮಧ್ಯಾಹ್ನ ಅನ್ನದಾನ ನೆರವೇರಲಿದೆ.

ಸಂಜೆ ೪.೩೦ ರಿಂದ ಕಳಶ ಮೆರವಣಿಗೆ ಹಾಗೂ ಹೊರೆಕಾಣಿಕೆ, ೫.೩೦ಕ್ಕೆ ಬಿಂಬ ಶುದ್ಧಿ, ಬಿಂಬಿ ಶುದ್ಧಿ ಹೋಮ, ಆದಿವಾಸ ಹೋಮ, ಆದಿವಾಸ ಪೂಜೆ, ಪ್ರಸಾದ ಶುದ್ಧಿ ಹಾಗೂ ಮಹಾಪೂಜೆ ನಡೆಯಲಿದೆ.

ಜೂ.೮ ರಂದು ಬಿಂಬದಲ್ಲಿ ತತ್ವನ್ಯಾಸ ಮತ್ತು ತತ್ವನ್ಯಾಸ ಹೋಮ, ಬಿಂಬ ಆದಿವಾಸ ಪೂಜೆ, ಧಾನ್ಯಾದಿವಾಸ ನೆರವೇರಲಿದ್ದು, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ಹಾಗೂ ಅನ್ನದಾನ ನಡೆಯಲಿದೆ. ಸಂಜೆ ೫.೩೦ ರಿಂದ ಕಳಸ ಪ್ರತಿಷ್ಠೆ, ಕಳಶಾಧಿವಾಸ ಹೋಮ, ವಾಸ್ತು ರಾಕ್ಷೋಘ್ನ ಹೋಮ, ಬಿಂಬ ಶಯ್ಯದಿವಾಸ ಪೂಜೆ ನಡೆಯಲಿದೆ.

ರಾತ್ರಿ ೭ ಗಂಟೆಗೆ ಮಕ್ಕಳಿಂದ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ್ದು, ೯ ಗಂಟೆಗೆ ಮಹಾಪೂಜೆ ನೆರವೇರಲಿದೆ.

ಜೂ.೯ ರಂದು ಬೆಳಿಗ್ಗೆ ೬.೩೦ಕ್ಕೆ ಪ್ರತಿಷ್ಠಾ ಪ್ರಧಾನ ಹೋಮ, ೮.೩೫ಕ್ಕೆ ದೇವಿಯ ಪುನರ್‌ಪ್ರತಿಷ್ಠೆ, ದುರ್ಗಾಹೋಮ, ಪ್ರಸನ್ನ ಪೂಜೆ, ಬ್ರಹ್ಮಕಲಶಾಭಿಷೇಕ ಸೇವೆಯ ಪೂಜೆಗಳು ನಡೆಯಲಿದ್ದು, ೧೨.೩೦ಕ್ಕೆ ಮಹಾ ಮಂಗಳಾರತಿ, ೧ ಗಂಟೆಗೆ ಅನ್ನದಾನ ಸೇವೆ ನಡೆಯಲಿದೆ ಎಂದು ದೇವಾಲಯ ಟ್ರಸ್ಟ್‌ನ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net