ನೂತನ ಗೋಶಾಲೆಗೆ ಗೋವುಗಳ ಸ್ಥಳಾಂತರ

PTR_14 JUN_4
Published on

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಮಧೇನು ಗೋಶಾಲೆಯನ್ನು ಗೋಪೂಜೆ ಸೇವೆ, ಗೋಗ್ರಾಸ ನೀಡಲು ಭಕ್ತರ ಬೇಡಿಕೆಯಂತೆ ಮತ್ತು ಗೋವುಗಳ ಹಿತದೃಷ್ಟಿಯಿಂದ ನೂತನ ಗೋಶಾಲೆಗೆ ತಾತ್ಕಾಲಿಕ ಸ್ಥಳಾಂತರ ಕಾರ್ಯಕ್ರಮ ನಡೆಯಿತು.

ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ವಸಂತ ಕೆದಿಲಾಯ ಗೋಪೂಜೆ ನೆರವೇರಿಸಿದರು. ಶಾಸಕ ಅಶೋಕ್ ಕುಮಾರ್ ರೈ ನೂತನ ಕಾಮಧೇನು ಗೋಶಾಲೆ ಉದ್ಘಾಟಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ದಂಪತಿ ಗೋವಿಗೆ ಆರತಿ ಬೆಳಗಿದರು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ಈಶ್ವರ ಬೆಡೇಕರ್, ಸುಭಾಷ್ ರೈ ಬೆಳ್ಳಿಪ್ಪಾಡಿ, ನಳಿನಿ ಪಿ. ಶೆಟ್ಟಿ, ವಿನಯ ಸುವರ್ಣ, ಕೃಷ್ಣವೇಣಿ, ದಿನೇಶ್ ಪಿ.ವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ಸುದೇಶ್ ಚಿಕ್ಕಪುತ್ತೂರು, ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ವಿಶ್ವನಾಥ, ರೇಖಾ, ಗೋಶಾಲೆ ಮತ್ತು ಬಸವನ ಚಾಕ್ರಿಯವರು ಉಪಸ್ಥಿತರಿದ್ದರು.

ದೇವಳದ ಅಂಗಣದಲ್ಲಿ ಒಂದು ಹಸು ಮತ್ತು ಕರುವನ್ನು ಇರಿಸಿ ಅಲ್ಲಿ ಗೋ ಪೂಜೆ ಮಾಡಲಾಗುತ್ತಿತ್ತು. ಗೋಪೂಜೆ ಮಾಡುವ ಸಂದರ್ಭ ಗೋವು ಮತ್ತು ಭಕ್ತರಿಗೆ ವಿಶಾಲ ಸ್ಥಳಾವಕಾಶಕ್ಕೆ ಭಕ್ತರ ಬೇಡಿಕೆಯಿತ್ತು. ಈ ನಿಟ್ಟಿನಲ್ಲಿ ತಕ್ಷಣ ತಾತ್ಕಾಲಿಕ ವ್ಯವಸ್ಥೆಯಾಗಿ ವಿಶಾಲವಾಗಿರುವ ಸ್ಥಳಕ್ಕೆ ಗೋಶಾಲೆಯನ್ನು ಸ್ಥಳಾಂತರಿಸಲಾಗಿದೆ.

| ಈಶ್ವರ ಭಟ್ ಪಂಜಿಗುಡ್ಡೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net