ಬಸವೇಶ್ವರ ದೇವಾಲಯದ ವಾರ್ಷಿಕ ಪೂಜೋತ್ಸವ

temple
Published on

ಕುಶಾಲನಗರ:

ಕುಶಾಲನಗರ ತಾಲೂಕು ಕೂಡ್ಲೂರು ನವಗ್ರಾಮಕ್ಕೆ ಹೊಂದಿಕೊAಡಿರುವ ಗುಡ್ಡದ ಮೇಲಿನ ಬಯಲು ಬಸವೇಶ್ವರ ದೇವಾಲಯದಲ್ಲಿ ಈಚೆಗೆ ದೇವರ ವಾರ್ಷಿಕ ಪೂಜೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಬೆಳಗ್ಗೆ ದೇವಾಲಯದಲ್ಲಿ ಗಣಪತಿ ಹೋಮ ಮತ್ತು ರುದ್ರಾಭಿಷೇಕ ಪೂಜೆ ನಡೆಯಿತು. ಮಧ್ಯಾಹ್ನ 12.30 ಕ್ಕೆ ದೇವತಾ ಮೂರ್ತಿಗಳನ್ನು ಬಗೆ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಿ ಮಹಾಪೂಜೆ ನೆರವೇರಿಸಲಾಯಿತು. ನಂತರ ಮೂರು ಗಂಟೆಯವರೆಗೆ ಅನ್ನದಾನ ಏರ್ಪಡಿಸಲಾಗಿತ್ತು.

ಈ ಸಂದರ್ಭ ಊರಿನ ಯಜಮಾನ ಜವರೇಗೌಡ, ಕಾರ್ಯದರ್ಶಿ ಪವನ್ ಕುಮಾರ್, ಪಂಚಾಯಿತಿ ಸದಸ್ಯ ಕೆ.ಕೆ. ಭೋಗಪ್ಪ, ಉದ್ಯಮಿ ಕೆ.ಕೆ. ಮಂಜುನಾಥ್ ಕುಮಾರ್, ವಿನಾಯಕ ಬಳಗದ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಜವರಪ್ಪ, ಕೆ.ಬಿ. ಈರಪ್ಪ, ಬಸವರಾಜು, ಮೋಹನ್ ಭಟ್, ಕೆ.ಹೆಚ್. ಗಿರೀಶ್, ಅಣ್ಣಾಜಿ, ರಾಮ, ರವಿ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net