

ಕುಶಾಲನಗರ:
ಕುಶಾಲನಗರ ಪುರಸಭಾ ವ್ಯಾಪ್ತಿಯ ಗುಮ್ಮನಕೊಲ್ಲಿ ಗ್ರಾಮದ ಗ್ರಾಮದೇವತೆ ಹುಚ್ಚಮ್ಮ ಮತ್ತು ಮಾರಮ್ಮ ದೇವರ ನೂತನ ವಿಗ್ರಹಗಳ ಪ್ರತಿಷ್ಠಾಪನಾ ಮಹೋತ್ಸವ ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರವೇರಿತು. ಇದರ ಜತೆಗೆ ನೂತನ ದೇವಾಲಯದ 48ನೇ ದಿನದ ಬಲಿ ಪೂಜೆ ಕಾರ್ಯಕ್ರಮವೂ ನಡೆಯಿತು.
ನಂತರ ಶಾಲಾ ಮೈದಾನದಲ್ಲಿ ಸಾರ್ವಜನಿಕ ಭಕ್ತಾಧಿಗಳಿಗೆ ದೇವಾಲಯ ಸಮಿತಿ ವತಿಯಿಂದ ಮಾಂಸಾಹಾರ ಹಾಗೂ ಸಸ್ಯಾಹಾರ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.
ದೇವಾಲಯ ಸಮಿತಿ ಅಧ್ಯಕ್ಷ ಕೆ. ವಿಶ್ವನಾಥ್, ಕಾರ್ಯದರ್ಶಿ ದಂಡಿನ ನವೀನ್, ಖಜಾಂಜಿ ಜಿ.ಜೆ. ಗಣಪತಿ, ಗೌರವಾಧ್ಯಕ್ಷ ಬಿ.ಜೆ. ರವಿಕುಮಾರ್, ಉಪಾಧ್ಯಕ್ಷ ಜಯರಾಜು, ಸದಸ್ಯರಾದ ರವಿ, ಸ್ವಾಮಿಗೌಡ, ನಿಂಗರಾಜು, ಲೋಕೇಶ್, ಎಂ.ಆರ್. ಗಣೇಶ್, ಭರತ್, ಮಹೇಶ್, ಜಿ.ಟಿ. ಮಹೇಶ್, ಪ್ರಸನ್ನ, ಮಂಜು, ಹೆಚ್.ಜಿ. ಮಂಜುನಾಥ್ ಇದ್ದರು.
ಕುಶಾಲನಗರದ ಕನ್ನಿಕಾ ಪರಮೇಶ್ವರಿ ದೇವಾಲಯದ ಅರ್ಚಕ ಗಿರೀಶ್ ಭಟ್, ಮುಳ್ಳುಸೋಗೆಯ ಶಿವಣ್ಣ ಪೂಜಾ ವಿಧಿ ನೆರವೇರಿಸಿದರು.