

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಹಿನ್ನೆಲೆಯಲ್ಲಿ ದೇವರ ಬಲಿ ನಡೆಯಿತು.
ಗುರುವಾರ ರಾತ್ರಿ ಅಂಕುರಾರ್ಪಣ, ಬಲಿ ಹೊರಟು ಉತ್ಸವ ನಡೆಯಿತು. ಇದಕ್ಕೂ ಮೊದಲು ಪೂರ್ವ ಆಚರಣೆಯಂತೆ ದೀವಟಿಗೆ ಸಲಾಮ್ ನಡೆಯಿತು. ಪ್ರತಿಯೊಂದು ಗುಡಿಯ ಬಳಿಗೂ ಆಡಳಿತ ಸಮಿತಿಯವರನ್ನು ದೀವಟಿಗೆ ಹಿಡಿದು ಕರೆದುಕೊಂಡು ಹೋಗಲಾಗುತ್ತದೆ. ದೇವರು ಹೊರಡುವ ಮೊದಲು ಹಿಂದಿನ ಠಾಣೆಗೆ(ಮಹಿಳಾ ಠಾಣೆ) ತೆರಳಿ ಅಲ್ಲಿಂದ ಸಿಬ್ಬಂದಿ ಆಗಮಿಸಬೇಕಾಗಿದೆ.
ದೇವರ ಬಲಿ ಬೊಳುವಾರು, ಶ್ರೀರಾಮ ಪೇಟೆ ಕಾರ್ಜಾಲು, ರಕ್ತೇಶ್ವರಿ ದೇವಸ್ಥಾನ, ಕಲ್ಲೇಗ, ಕರ್ಮಲ ಸವಾರಿ ನಡೆಯಿತು. ವಿವಿಧ ಕಡೆಯಲ್ಲಿ ಕಟ್ಟೆ ಪೂಜೆಯನ್ನು ದೇವರು ಸ್ವೀಕರಿಸಿದರು.