

ಮಡಿಕೇರಿ:
ಸಮೀಪದ ಇಬ್ನಿವಳವಾಡಿ ಗ್ರಾಮದ ಶ್ರೀ ಭದ್ರಕಾಳಿ ದೇವಿಯ ವಾರ್ಷಿಕ ಉತ್ಸವ ಮಾ.29 ಮತ್ತು 30ರಂದು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊAದಿಗೆ ನಡೆಯಲಿದೆ. ಮಾ.29 ರಂದು ಮಧ್ಯಾಹ್ನ 1.30 ಗಂಟೆಗೆ ಕೊಡಿಆಟ್, 2 ಗಂಟೆಗೆ ಆಂಗೋಲ, ಪೊಂಗೋಲ, 2.30 ಗಂಟೆಗೆ ಪೀಲಿ ಆಟ್, 3 ಗಂಟೆಗೆ ಕೊಂಬಾಟ್ ಜರುಗಲಿದೆ. ನಂತರ ದೇವಿಯ ದರ್ಶನ ಹಾಗೂ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ ನಡೆಯಲಿದೆ.
ಮಾ.30 ರಂದು ಸಂಜೆ 5 ಗಂಟೆಗೆ ಕೊಂಬಾಟ್, ದೇವಿಯ ದರ್ಶನ, ದೇವರ ಜಳಕ ಜರುಗಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.