೨೪ ಗಂಟೆಯಲ್ಲಿ ೪೨.೮ ಡಿಗ್ರಿ ಸೆ.ಬಿಸಿಲು ದಾಖಲು

Temperature
Temperature
Published on

ರಾಯಚೂದು ದಿನದಿಂದ ದಿನಕ್ಕೆ ಜಿ¯್ಲÉಯಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಕಳೆದ ೨೪ ಗಂಟೆಯಲ್ಲಿ ೪೨.೮ ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿ ಜನರಿಗೆ ಹೈರಾಣಾಗಿಸಿದೆ.

ನಗರ ಸೇರಿದಂತೆ ಜಿ¯್ಲÉಯಾದ್ಯಂತ ಬೇಸಿಗೆಯ ತಾಪ ಜÁಸ್ತಿಯಾಗುತ್ತಿದ್ದು ಪ್ರಸಕ್ತ ಸಾಲಿನ ಬೇಸಿಗೆ ಆರಂಭದಲ್ಲಿಯೇ ೪೨.೮ ಡಿಗ್ರಿ ಸೆಲ್ಸಿಯ್ಸï ಗರಿಷ್ಠ ತಾಪಮಾನ ದಾಖಲಾಗಿರುವುದರಿಂದ ಬಿಸಿಲನಾಡಿನ ಜನ ಅಕ್ಷರಶಃ ತತ್ತರಿಸಿ ಹೋಗುತ್ತಿz್ದÁರೆ.

ಬುಧವಾರ ಪ್ರಕಟಗೊಂಡ ಹವಮಾನ ವರದಿಯಲ್ಲಿ ಕಳೆದ ೨೪ ಗಂಟೆಗಳಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ೪೨.೮ ಡಿ.ಸೆ ಗರಿಷ್ಠ ಅದೇ ರೀತಿ ೩೦ ಡಿ.ಸೆ. ಕನಿಷ್ಠ ತಾಪಮಾನ ರಾಯಚೂರು ಜಿ¯್ಲÉಯಲ್ಲಿ ದಾಖಲಾಗಿದ್ದು, ಉಳಿದಂತೆ ಪಕ್ಕದ ಜಿ¯್ಲÉ ಬೀದರ್ ಮತ್ತು ಬಾಗಲಕೋಟೆ ೪೧.೯, ಬೆಳಗಾವಿ ೪೧.೮, ಕಲಬುರಗಿಯಲ್ಲಿ ೪೧.೭ ಡಿಗ್ರಿ ಸೆಲ್ಸಿಯಸï ತಾಪಮಾನ ದಾಖಲಾಗಿದ್ದು, ರಾಜ್ಯದ ೦೫ ಜಿ¯್ಲÉಗಳಲ್ಲಿ ಬೇಸಿಗೆಯ ತಾಪಮಾನ ಗರಿಷ್ಠ ೪೦ ಡಿ.ಸೆ ದಾಟಿದೆ.

ಈ ಬಾರಿ ಬಿಸಿಲಿನ ಧಗೆ -Éಬ್ರವರಿಯಿಂದಲೇ ಶುರುವಾಗಿದೆ. ಮಾರ್ಚ್ ಆರಂಭದಲ್ಲಿಯೇ ೪೦ ಡಿ.ಸೆ ತಾಪಮಾನ ಗಡಿದಾಟಿದೆ. ಏಪ್ರಿಲï ಹಾಗೂ ಮೇ ನಲ್ಲಿ ಇನ್ನಷ್ಟು ಬಿಸಿಲಿನ ತಾಪಮಾನ ಹೆಚ್ಚಾಗುತ್ತದೆ. ಉಷ್ಣಗಾಳಿ ಹಿನ್ನೆಲೆ ವಾತಾವರಣದಲ್ಲಿ ೧ ರಿಂದ ೨ ಡಿಗ್ರಿ ಸೆಲ್ಸಿಯಸï ಉಷ್ಣಾಂಶ ಹೆಚ್ಚಳವಾಗಿದ್ದು. ಬೇಸಿಗೆಯ ತಾಪಮಾನಕ್ಕೆ ಜನರ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಲಕ್ಷಣಗಳು ಶುರುವಾಗಿವೆ. ಜನರೇ ಸ್ವಯಂ ಪ್ರೇರಿತವಾಗಿ ಮುಂಜÁಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಮಧ್ಯಾಹ್ನ ವೇಳೆ ಹೊರಗೆ ಬರದಂತೆ ಜಿ¯್ಲÁಡಳಿತದಿಂದ ಎಚ್ಚರಿಕೆ ನೀಡಲಾಗಿದೆ.

Temperatures reach,42.8 degrees,raichur,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net