ಸಂಘಟನೆಯಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ

web 2
Published on

ಪಂಚನಹಳ್ಳಿ: ಸಂಘಟನೆಯಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಕಡೂರಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.

ಆಲಘಟ್ಟದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯ ತೆಲುಗು ಗೌಡ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ತೆಲುಗು ಗೌಡ ಸಮಾಜ ರಾಜಕೀಯವಾಗಿ ಶಕ್ತಿ ಪಡೆಯಲು ಸಮಾಜದಲ್ಲಿ ಒಗ್ಗಟ್ಟು ಮೂಡಬೇಕಿದೆ. ಸಂಘದ ನೂತನ ಪದಾಧಿಕಾರಿಗಳು ಹಂಚಿಹೋದ ಸಮಾಜದ ಮುಖಂಡರನ್ನು ಒಂದೇ ವೇದಿಕೆಯಡಿ ತರುವ ಕೆಲಸ ಮಾಡಬೇಕು. ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದಿದ್ದರೂ ನಂಬಿಕೆಗೆ ಅರ್ಹವಾದ ಸಮಾಜ ಎಂಬುದನ್ನು ತೆಲುಗು ಗೌಡ ಸಮಾಜ ಅನೇಕ ಬಾರಿ ಸಾಬೀತುಪಡಿಸಿದೆ ಎಂದರು.

ನೂತನ ಅಧ್ಯಕ್ಷ ಎಸ್.ಬಿ.ಹನುಮಂತಪ್ಪ ಮಾತನಾಡಿ, ತೆಲುಗು ಗೌಡ ಸಮಾಜದ ರೈತರಿಗೆ 3 ಸಾವಿರ ಎಕರೆ ಭೂಮಿ ಸಾಗುವಳಿ ಚೀಟಿ ಕೊಡಿಸಿದ ಕೀರ್ತಿ ಮಾಜಿ ಶಾಸಕ ದಿವಂಗತ ಎಸ್.ಆರ್.ಲಕ್ಷ್ಯ್ಯು ಅವರಿಗೆ ಸಲ್ಲುತ್ತದೆ. ಸಮಾಜದ ಹೆಸರಿನಲ್ಲಿ ಬೀರೂರಿನಲ್ಲಿರುವ ನಿವೇಶನ ಅಭಿವೃದ್ಧಿಪಡಿಸಬೇಕಿದೆ. ದೇವೇಗೌಡರು ನೀಡಿದ 12 ಲಕ್ಷ ರೂ. ಅನುದಾನದಲ್ಲಿ ಸಮುದಾಯ ಭವನ ನಿರ್ವಣಕ್ಕೆ ಚಾಲನೆ ನೀಡಿದ್ದು ಪಿಲ್ಲರ್ ಹಂತಕ್ಕೆ ಬಂದು ನಿಂತಿದೆ. ವಿಧಾನ ಪರಿಷತ್ ಸದಸ್ಯರು ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net