ಮಕ್ಕಳಿಗೆ ಸತ್ಯುರುಷರ ಸಂದೇಶ, ನುಡಿಗಳನ್ನು ತಿಳಿಸಿಕೊಡಿ

Tell the children the message and words of Satyurusha
ವಿಜಯಪುರದ ಕಂದಗಲ್ಲ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ಸೋಮಲಿಂಗ ಗೆಣ್ಣೂರ, ಎ.ಬಿ. ಅಲ್ಲಾಪುರ, ಸಂತೋಷ ಭೋವಿ ಮತ್ತಿತರರಿದ್ದಾರೆ.
Published on

ವಿಜಯಪುರ: ನೇರ&ನಿಷ್ಠುರ, ಆದರ್ಶ ವಿಚಾರ ಹಾಗೂ ಸತ್ಯ ನುಡಿಗಳನ್ನು ತ್ರಿಪದಿ ಮೂಲಕ ಜಗತ್ತಿಗೆ ಸಾರಿ ಜನಮಾನಸದಲ್ಲಿ ನೆಲೆನಿಂತ ಕವಿ ಸರ್ವಜ್ಞ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ., ಕನ್ನಡ ಮತ್ತು ಸಂಸತಿ ಇಲಾಖೆಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಂಡಿದ್ದನ್ನು, ಅನುಭವಿಸಿದ್ದನ್ನು ಕೇವಲ ಮೂರು ಸಾಲುಗಳಲ್ಲಿ ಸರಳವಾಗಿ ಒಳಿತು ಕೆಡಕುಗಳ ಸಂದೇಶವನ್ನು ತ್ರಿಪದಿಗಳಲ್ಲಿ ಸರ್ವರು ಈ ಲೋಕಕ್ಕೆ ಸಾರಿದರು ಎಂದರು.

ಸಕಲ ಸಂಪತ್ತಿನಲ್ಲಿ ವಿದ್ಯೆಯೇ ಶ್ರೇಷ್ಠ ಸಂಪತ್ತು. ವಿದ್ಯೆ ಎಂಬ ಸಂಪತ್ತನ್ನು ದಾರ್ಶನಿಕರ, ವಚನಕಾರರ ಸಾರವನ್ನು ಇಂದಿನ ಯುವ ಜನಾಂಗ ಅರಿತುಕೊಳ್ಳಬೇಕು. ಸತ್ಪುರುಷರ ಸಂದೇಶ, ನುಡಿಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಸರ್ವ ತಮ್ಮ ತ್ರಿಪದಿಗಳ ಮೂಲಕ ಅತ್ಯಂತ ಸರಳವಾಗಿ ಜನರಾಡುವ ಭಾಷೆಯಲ್ಲಿ ಕಟ್ಟಿಕೊಟ್ಟು ಜನಮಾನಸದಲ್ಲಿ ಮನೆ&ಮನಗಳಲ್ಲಿ ಜನಜನಿತರಾಗಿದ್ದಾರೆ ಎಂದು ಹೇಳಿದರು.

ಉಪನ್ಯಾಸಕಿ ಪೂಜಾ ಕೆ.ಎಸ್​., ಉಪನ್ಯಾಸ ನೀಡಿ, ಸರ್ವರ ತ್ರಿಪದಿಗಳು ಕೇವಲ ಒಂದೇ ೇತ್ರಕ್ಕೆ ಸಿಮೀತವಾಗಿರದೆ ಸಮಾಜದ ಎಲ್ಲ ಬಗೆಯ ತೊಡಕುಗಳನ್ನು ದಿನ ಬಳಕೆ ನುಡಿಗಳ ಮೂಲಕ ಜನರಿಗೆ ತಿಳಿಸಿದ್ದಾರೆ. ಮೌಢ್ಯತೆ ತೊರೆದು, ಕಾಯಕ ಚಿತ್ತರಾಗಿ ಕರ್ಮ ಮಾಡಲು ಸರ್ವ ತ್ರಿಪದಿಯಲ್ಲಿ ತಿಳಿಸಿದ್ದಾರೆ ಎಂದು ಹೇಳಿದರು.

ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಹಾಗೂ ನಿವೃತ ಡಿವೈಎಸ್​ಪಿ ಸೋಮಲಿಂಗ ಕುಂಬಾರ ಮಾತನಾಡಿದರು. ವಿಜಯಪುರ ತಹಸೀಲ್ದಾರ್​ ಪ್ರಶಾಂತ ಚನಗೊಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಿ.ಪಂ., ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಎ.ಬಿ. ಅಲ್ಲಾಪುರ, ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಪಾಲಿಕೆ ಉಪ ಆಯುಕ್ತ ನಾರಾಯಣಕರ್​, ಸದಾನಂದ ಕುಂಬಾರ, ಅರವಿಂದ ಕುಂಬಾರ ಮತ್ತಿತರರಿದ್ದರು.

ಇದಕ್ಕೂ ಮುನ್ನ ಇಲ್ಲಿನ ಸಿದ್ಧೇಶ್ವರ ದೇವಸ್ಥಾನದ ಬಳಿ ಸಂತ ಕವಿ ಸರ್ವರ ಭಾವಚಿತ್ರದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹಾಗೂ ಎಎಸ್​ಪಿ ಶಂಕರ ಮಾರಿಹಾಳ ಚಾಲನೆ ನೀಡಿದರು. ಮೆರವಣಿಗೆಯು ಗಾಂಧಿ ವೃತ್ತ, ಅಂಬೇಡ್ಕರ್​ ವೃತ್ತ, ಕನಕದಾಸ ವೃತ್ತ ಮಾರ್ಗವಾಗಿ ಸಾಗಿ ರಂಗಮಂದಿಕ್ಕೆ ತಲುಪಿ ಸಮಾವೇಶಗೊಂಡಿತು. ಎಸ್​.ಪಿ. ಕುಂಬಾರ, ದೇವೇಂದ್ರ ಮೀರೆಕರ, ಗಿರೀಶ ಕುಲಕರ್ಣಿ, ಭೀಮರಾಯ ಜಿಗಜಿಣಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net