

ಲಿಂಗಸುಗೂರು: ಸಮುದಾಯದ ಜನರು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ನಮೂದಿಸದೆ ಮಾದಿಗ ಎಂಬ ಪದವನ್ನು ಮಾತ್ರ ಬರೆಸಬೇಕೆಂದು ಜಿಪಂ ಮಾಜಿ ಸದಸ್ಯ ಎಚ್.ಬಿ.ಮುರಾರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಹಟ್ಟಿ ಪಟ್ಟಣದಲ್ಲಿ ನೆಲೆಸಿರುವ ಪರಿಶಿಷ್ಟ ಜಾತಿಯ ತಮಿಳುನಾಡು, ಆಂಧ್ರ ಮೂಲದವರು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಹೆಸರಲ್ಲಿ ಗುರುತಿಸಿಕೊಂಡಿರುವುದು ಗೊಂದಲಕ್ಕೆ ಕಾರಣವಾಗಿದ್ದು, ಇದರಿಂದ ಒಳಮೀಸಲಾತಿ ಹಂಚಿಕೆ ವೇಳೆ ಮಾದಿಗ ಜನಾಂಗಕ್ಕೆ ಸಿಗಬೇಕಾದ ಮೀಸಲಾತಿ ಪ್ರಮಾಣ ಕಡಿತವಾಗಲಿದೆ.
ಕಾರಣ ದಲಿತ ಕಾಲನಿಗಳಿಗೆ ಗಣತಿ ಸಿಬ್ಬಂದಿ ಬಂದಾಗ ಮಾದಿಗ ಎಂದು ಬರೆಯಿಸಬೇಕೆಂದು ತಿಳಿಸಿದರು. ಪುರಸಭೆ ಸದಸ್ಯ ರುದ್ರಪ್ಪ ಬ್ಯಾಗಿ, ನಾಗರಾಜ ಅಸ್ಕಿಹಾಳ, ರಮೇಶ ಗೋಸ್ಲೆ, ಆಂಜನೇಯ ಭಂಡಾರಿ, ಮೌನೇಶ ಐದನಾಳ, ಮೋಹನ್ ಗೋಸ್ಲೆ, ಚಂದ್ರಶೇಖರ ಗೊರೇಬಾಳ, ಯಲ್ಲಪ್ಪ ಹಟ್ಟಿ ಇದ್ದರು.