

ವಿಜಯಪುರ: ಮಹಾತ್ಮ ಗಾಂಧಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನಕ್ಕೆ 100 ವರ್ಷ ಪೂರೈಸಿದ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಜ. 21 ರಂದು ಬೆಳಗಾವಿ ನಗರದಲ್ಲಿ ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ವ್ಯಾಪ್ತಿಯ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮಾವೇಶ ಯಶಸ್ವಿಗೊಳಿಸುವಂತೆ ಶಾಸಕ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ನಿಗಮದ ಅಧ್ಯ ಅಜಯಸಿಂಗ್ ಸಲಹೆ ನೀಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬುಧವಾರ ಬೆಳಗಾವಿ ಸಮಾವೇಶ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಪದಾಧಿಕಾರಿಗಳು, ನಾಯಕರು ತಮ್ಮ ತಮ್ಮ ಬೂತ್ ಮಟ್ಟದಲ್ಲಿ ಜನರಿಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಕುರಿತು ತಿಳಿಸಲು ಹೇಳಿದರು.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ನಿರುದ್ಯೋಗ ಸಮಸ್ಯೆ ನಿವಾರಿಸುತ್ತೇವೆ. ಪ್ರತಿಯೊಬ್ಬರ ಖಾತೆಗೆ 15 ಲ ರೂಪಾಯಿ ಜಮಾ ಮಾಡುವುದಾಗಿ ಹೇಳಿ 10 ವರ್ಷಕ್ಕೂ ಅಧಿಕ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ, ಯಾವುದೇ ಆಶ್ವಾಸನೆ ಈಡೇರಿಸಿಲ್ಲ. ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವಂತೆ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಕೆಪಿಸಿಸಿ ಸದಸ್ಯ ಅಬ್ದುಲಹಮೀದ ಮುಶ್ರೀಫ, ಪ್ರಧಾನ ಕಾರ್ಯದರ್ಶಿ ಮಹ್ಮದರಫೀಕ ಟಪಾಲ ಮಾತನಾಡಿ, ಬೆಳಗಾವಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಆಜಾದ ಪಟೇಲ, ಡಿ.ಎಚ್. ಕಲಾಲ, ಉಪ ಮೇಯರ್ ದಿನೇಶ ಹಳ್ಳಿ, ರಜಾಕ ಹೊರ್ತಿ, ನಾರಾಯಣ ಪ್ರಸಾದ ತಿವಾರಿ, ಪಕ್ಷದ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೋಡೆ, ಎಂ.ಎಂ. ಮುಲ್ಲಾ, ದೇಸು ಚವಾಣ, ಜಮೀರಹ್ಮದ ಬ, ಪಾಳಿಕೆ ಸದಸ್ಯೆ ಆರತಿ ಶಾಹಪೂರ, ಶಬ್ಬೀರ ಜಾಗಿರದಾರ, ಹೊನಮಲ್ಲ ಸಾರವಾಡ, ಪರಶುರಾಮ ಹೊಸಮನಿ, ಆನಂದ ಜಾಧವ, ವಿಜಯಕುಮಾರ ಕಾಳೆ, ಐ.ಎಂ. ಇಂಡಿಕರ, ಅಶ್ಪಾಕ ಮನಗೂಳಿ, ತಾಜುದ್ದೀನ ಖಲೀಫಾ, ಫಿರೋಜ ಶೇಖ, ಕಾಶಿಬಾಯಿ ಹಡಪದ, ಶೋಭಾ ಬಿರಾದಾರ, ವೀರೇಶ ಕಲಾಲ, ಬೀರಪ್ಪ ಜುಮನಾಳ, ಅಶೋಕ ಬಜಂತ್ರಿ, ಜಬ್ಬಾರ ಮುಲ್ಲಾ, ಇಲಿಯಾಸ ಅಹ್ಮದ ಸಿದ್ದೀಕಿ, ಎಂ.ಎ. ಬಗಲಿ, ಶಫೀಕ ಬಗದಾದಿ ಮತ್ತಿತರರಿದ್ದರು.