ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಿ

22ALD03
ಬೋಚನಹಳ್ಳಿಯಲ್ಲಿ ಗ್ರಾಪಂ, ಕರ್ನಾಟಕ ಆರೋಗ್ಯ ಸಂವರ್ದನಾ ಪ್ರತಿಷ್ಠಾನ ಸಂಸ್ಥೆಯಿಂದ ನಡೆದ ಅಂತರ ಕ್ರಿಯಾತ್ಮಕ ರಂಗಭೂಮಿ ಕಾರ್ಯಕ್ರಮ ನಡೆಯಿತು, ಪಿಡಿಓ ಶೇಖರಪ್ಪ, ಸಮುದಾಯ ಸಂಘಟಕರಾದ ಯಲ್ಲಪ್ಪ, ಗಾಯತ್ರಿ, ಪ್ರಮುಖರಾದ ಬಸವರಾಜ, ಹನುಮೇಶ, ಜಗದೀಶ ಇದ್ದರು.
Published on

ಅಳವಂಡಿ: ಸಮಾಜದಲ್ಲಿ ಹೆಣ್ಣು ಮಗು ಎದುರಿಸುತ್ತಿರುವ ತಾರತಮ್ಯವನ್ನು ತೊಡೆದು ಹಾಕಬೇಕಾಗಿದೆ. ಹೆಣ್ಣಿಗೆ ದೊರುಕುವ ಗೌರವ, ಮೌಲ್ಯಗಳನ್ನು ಖಾತ್ರಿಗೊಳಿಸುವುದು, ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಕೆಎಚ್‌ಪಿಟಿ ಸಮುದಾಯ ಸಂಘಟಕ ಯಲ್ಲಪ್ಪ ಮೆಣೆಗಾರ ತಿಳಿಸಿದರು.

ಸಮೀಪದ ಬೋಚನಹಳ್ಳಿಯಲ್ಲಿ ಗ್ರಾಪಂ, ಕರ್ನಾಟಕ ಆರೋಗ್ಯ ಸಂವರ್ದನಾ ಪ್ರತಿಷ್ಠಾನ ಸಂಸ್ಥೆಯ ಸ್ಪೂರ್ತಿ ಯೋಜನೆಯ ವತಿಯಿಂದ ನಡೆದ ಅಂತರ ಕ್ರಿಯಾತ್ಮಕ ರಂಗಭೂಮಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

ಕಾನೂನು ಪ್ರಕಾರ ಅಪಾರದಗಳಾದ ಬಾಲ ಕಾರ್ಮಿಕ, ಬಾಲ್ಯ ವಿವಾಹ ಕಂಡರೆ ನಿಲ್ಲಿಸಿ. ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಹಾಗೂ ಜನರಲ್ಲಿ ಲಿಂಗ ಸಮಾನತೆಯ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಸಮುದಾಯ ಸಂಘಟಕಿ ಗಾಯತ್ರಿ ಅಂಬಿಗೇರ ಮಾತನಾಡಿ, ಹೆಣ್ಣು ಮಕ್ಕಳು ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಸಮಾಜದಲ್ಲಿ ಹೆಣ್ಣು ಮಗುವಿನ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು ಹಾಗೂ ಅಸಮಾನತೆಯನ್ನು ಹೋಗಲಾಡಿಸಲು ಸರ್ವರು ಕೈಜೋಡಿಸಬೇಕು ಎಂದರು.

ಪಿಡಿಓ ಶೇಖರಪ್ಪ, ಪ್ರಮುಖರಾದ ಬಸವರಾಜ ಕೋಮಲಾಪುರ, ಹನುಮೇಶ ಆವೋಜಿ, ಜಗದೀಶ ಚಿನ್ನೂರ, ರೇಣುಕಾ ಬೀರೂರ, ಹುಲಿಗೆಮ್ಮ ಜೋಗಿನ, ಹೊನಕೇರಪ್ಪ ಹವಳಣ್ಣವರ, ಕುಳ್ಳೆಲೆಪ್ಪ ಬಾಗಳಿ, ಸಣ್ಣ ಭೀಮಪ್ಪ ಬಂಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net