

ಬೆಳ್ತಂಗಡಿ: ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ತೆಲಂಗಾಣ ಸಾರಿಗೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪೊನ್ನಂ ಪ್ರಭಾಕರ್ ಗುರುವಾರ ಭೇಟಿ ನೀಡಿ ಸಂಘದ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿ, ಸಹಕಾರಿ ಸಂಘವೊಂದು ನಗರದಲ್ಲಿ ಸುಂದರವಾದ ಸುಸಜ್ಜಿತ ಸೌಲಭ್ಯಗಳ ಕಟ್ಟಡವನ್ನು ಹೊಂದಿರುವುದಕ್ಕೆ ಹಾಗೂ ಸಂಘದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಭಗೀರಥ ಜಿ. ಹಾಗೂ ನಿರ್ದೇಶಕರಾದ ಸುಜೀತಾ ವಿ.ಬಂಗೇರ, ರಕ್ಷಿತ್ ಶಿವರಾಂ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ಅವರು ಪೊನ್ನಂ ಪ್ರಭಾಕರ್ ಅವರನ್ನು ಗೌರವಿಸಿದರು. ಜಿ.ಪಂ. ಮಾಜಿ ಸದಸ್ಯ ಶೇಖರ ಕುಕ್ಕೇಡಿ, ಜಿಲ್ಲಾ ಕೆ.ಡಿ.ಪಿ. ಸದಸ್ಯ ಸಂತೋಷ್, ಕೇಂದ್ರ ಕಚೇರಿಯ ವ್ಯವಸ್ಥಾಪಕ ಕೀರ್ತನ್ ಕುಮಾರ್, ಮಾರಾಟ ಅಧಿಕಾರಿ ಶಿವಪ್ರಕಾಶ್, ಮಾನವ ಸಂಪನ್ಮೂಲ ಅಧಿಕಾರಿ ರೂಪಲತಾ, ಕಕ್ಕಿಂಜೆ ಶಾಖಾ ಕಚೇರಿ ವ್ಯವಸ್ಥಾಪಕ ಜಾರಪ್ಪ ಪೂಜಾರಿ ಮೊದಲಾದವರಿದ್ದರು.