ಟೇಕ್ವಾಂಡೋ ಚಾಂಪಿಯನ್‌ಶಿಪ್ಶಾರದ ವಿದ್ಯಾನಿಕೇತನದ ವಿದ್ಯಾರ್ಥಿಗಳಿಗೆ ಪದಕ

mng--23 Aug Sharada maleshya
Published on


ಮಂಗಳೂರು: ಶಾರದ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜಿನ ವಿದ್ಯಾರ್ಥಿಗಳು ಅ.18 ರಿಂದ 23ರ ನಡುವೆ ಮಲೇಷ್ಯಾದ ಜುವಾರಾ ಸ್ಟೇಡಿಯಂನಲ್ಲಿ ನಡೆದ ಓಪನ್ ಇಂಟರ್ನ್ಯಾಷನಲ್ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು.

ವಿದ್ಯಾರ್ಥಿಗಳು 1 ಚಿನ್ನ, 1 ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು ಪಡೆದರು. ಕ್ರೀಡಾಪಟುಗಳಿಗೆ ಡಾ.ಗುರುರಾಜ ಇಟಗಿ ಮತ್ತು ನಿಖಿಲ್ ಶೆಟ್ಟಿ ತರಬೇತಿ ನೀಡಿದ್ದಾರೆ. ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್, ನಿರ್ದೇಶಕ ಸಮೀರ್ ಪುರಾಣಿಕ್, ಸಂಸ್ಥೆಗಳ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕ್ರೀಡಾಪಟುಗಳನ್ನು ಅಭಿನಂದಿಸಿದರು.
ವಿಜೇತರ ವಿವರ:


ಚಿನ್ನದ ಪದಕ: ಸಂಹಿತಾ ಅಲೆವೂರಾಯ (ಲೈಟ್ ವೇಟ್), ಬೆಳ್ಳಿ ಪದಕ: ಪ್ರಶಂಸ ಶೆಟ್ಟಿ (ಕೆಡೆಟ್ ಬಂಟಂ),ಕಂಚಿನ ಪದಕ: ಸಂಹಿತಾ ಅಲೆವೂರಾಯ (ಲೈಟ್ ವೇಟ್), ಮಹಮ್ಮದ್ ಇಸ್ಮಾಯಿಲ್ ಅಫ್ಫಾಮ್ (ಕೆಡೆಟ್ ಫಿನ್ ವೇಟ್), ಅನಿಕೇತನ ಚಂದ್ರಶೇಖರ್ (ಕೆಡೆಟ್ ಬಂಟಂ, ಮೈಲೇಶ್ ಗೌರಿ ಶಂಕರ್ (ಕೆಡೆಟ್ ಹೆವಿ) ಮತ್ತು ಯುವರಾಜ್ ವನಸಿರಿ (ಕೆಡೆಟ್ ಹೆವಿ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net