

ಉಪ್ಪಿನಂಗಡಿ: ತೆಕ್ಕಾರು ಶ್ರೀ ಗೋಪಾಲಕಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಮಿತಿ ಅಧ್ಯಕ್ಷರಾಗಿ ಶಶಿಧರ್ ಶೆಟ್ಟಿ ಬರೋಡಾ ಹಾಗೂ ಪ್ರಧಾನ ಸಂಚಾಲಕರಾಗಿ ಶಾಸಕ ಹರೀಶ್ ಪೂಂಜ ಅವರನ್ನು ಆಯ್ಕೆ ವಾಡಲಾಯಿತು.
ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇಗುಲದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಸಮಿತಿ ರಚನಾ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಸಮಿತಿ ಗೌರವಾಧ್ಯಕ್ಷರಾಗಿ ಗಣೇಶ್ ರಾವ್ ಕರಾವಳಿ ಕಾಲೇಜ್ ಹಾಗೂ ಸಂಸದ ಬ್ರಿಜೇಶ್ ಚೌಟ, ಯೋಗೀಂದ್ರ ಭಟ್ ಉಳಿ, ಉಪ್ಪಿನಂಗಡಿಯ ಕರುಣಾಕರ ಸುವರ್ಣ, ಕಾರ್ಯಾಧ್ಯಕ್ಷರಾಗಿ ಲಕ್ಷ್ಮಣ, ಪ್ರಧಾನ ಕಾರ್ಯದರ್ಶಿಯಾಗಿ ಬಾರ‌್ಯ ಸಿಎ ಬ್ಯಾಂಕ್ ಅಧ್ಯಕ್ಷ ಪ್ರಶಾಂತ ರೈ, ಕೋಶಾಧಿಕಾರಿಯಾಗಿ ಅಣ್ಣಿ ಪೂಜಾರಿ ಹಾಗೂ ವಿವಿಧ ಉಪಸಮಿತಿಗಳ ಸಂಚಾಲಕರನ್ನು ಆಯ್ಕೆ ಮಾಡಿ ಹೊಣೆ ವಹಿಸಲಾಯಿತು. ಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷ ನಾಗಭೂಷಣ್ ರಾವ್, ತುಕರಾಂ ನಾಯಕ್, ಗಣೇಶ್ ರಾವ್ ಹಾಗೂ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯ ದಯಾನಂದ ಪೂಜಾರಿ, ನವೀನ ನೆರಿಯ, ಮಂಜುನಾಥ ಸಾಲ್ಯಾನ್, ಅನಂತ ಪ್ರಸಾದ್ ನೈತಡ್ಕ ಉಪಸ್ಥಿತರಿದ್ದರು.