ತೆಕ್ಕಲಕೋಟೆ ಸಿಎಚ್‌ಸಿಗೆ ಅಗತ್ಯ ಸೌಲಭ್ಯ ಕಲ್ಪಿಸಿ

Sirguppa Manavi
ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರದ ಮುಂದೆ ತಾಲೂಕು ಆರೋಗ್ಯಾಧಿಕಾರಿ ಬಿ.ಈರಣ್ಣಗೆ ಸ್ಥಳೀಯ ಮುಖಂಡರು ಸೋಮವಾರ ಮನವಿ ಸಲ್ಲಿಸಿದರು. ಪ್ರಮುಖರಾದ ಎನ್.ಕೆ.ಶಿವು, ಎನ್. ಪೈಗಂಬರ್, ಶಿವಪ್ಪ ಇತರರಿದ್ದರು.
Published on

ಸಿರಗುಪ್ಪ: ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನೇಮಕ ಸೇರಿ ಅಗತ್ಯ ಸೌಲಭ್ಯ ಒದಗಿಸಬೇಕೆಂದು ಸ್ಥಳೀಯ ಮುಖಂಡರು ಸೋಮವಾರ ಶಾಸಕ ಬಿ.ಎಂ.ನಾಗರಾಜ ಹಾಗೂ ತಾಲೂಕು ಆರೋಗ್ಯಾಧಿಕಾರಿ ಬಿ.ಈರಣ್ಣಗೆ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಹೆದ್ದಾರಿ 150ಎ ಕಾಕಿರಣ್ಣ ದೇವಸ್ಥಾನದ ಬಳಿ ಈಚೆಗೆ ರಸ್ತೆ ಅಪಘಾತ ಸಂಭವಿಸಿ ಇಬ್ಬರು ಬೈಕ್ ಸವಾರರು ತೀವ್ರ ಗಾಯಗೊಂಡು ನರಳಾಡುತ್ತಿದ್ದರು. ಸಿಎಚ್‌ಸಿಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಬಿಮ್ಸ್‌ಗೆ ತೆರಳಲು ಆಂಬುಲೆನ್ಸ್ ಇರಲಿಲ್ಲ. ಇದರಿಂದ ಬೇರೆ ಖಾಸಗಿ ವಾಹನದಲ್ಲಿ ಕರೆದೊಯ್ಯಲಾಯಿತು.

ತುರ್ತು ಸಂದರ್ಭದಲ್ಲಿ ಹೀಗಾದರೆ ಸಾಕಷ್ಟು ಜೀವಗಳು ಹಾನಿಯಾಗಲಿವೆ. ಎರಡು ಆಂಬುಲೆನ್ಸ್ ನೀಡಿದ್ದರೂ ತುರ್ತು ಸಂದರ್ಭದಲ್ಲಿ ಸೇವೆಗೆ ಸಿಗದ ಕಾರಣ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಬೇಕು. ವೈದ್ಯರ ನೇಮಕಾತಿ ಸೇರಿ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net