ತೆಕ್ಕಲಕೋಟೆಯ ಬ್ಯಾಂಕ್ ಸಹಾಯಕ ವ್ಯವಸ್ಥಾಪಕನಿಗೂ ತಗುಲಿದ ಕರೊನಾ ಸೊಂಕು, ಸಿಬ್ಬಂದಿ, ಗ್ರಾಹಕರಿಗೆ ಆತಂಕ

Siriguppa Syndicate Bank Employee Corona
ತೆಕ್ಕಲಕೋಟೆಯ ಸಿಂಡಿಕೇಟ್ ಬ್ಯಾಂಕ್ ನೌಕರನಿಗೆ ಕರೊನಾ ಸೋಂಕು ತಗುಲಿದ ಹಿನ್ನ್ನೆಲೆಯಲ್ಲಿ ಶುಕ್ರವಾರ ಬ್ಯಾಂಕ್ ಅನ್ನು ಸೀಲ್‌ಡೌನ್ ಮಾಡಲಾಯಿತು.
Published on

ಸಿರಗುಪ್ಪ: ತೆಕ್ಕಲಕೋಟೆಯ 2ನೇ ವಾರ್ಡ್‌ನಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ನ 28 ವರ್ಷದ ಸಹಾಯಕ ವ್ಯವಸ್ಥಾಪಕನಿಗೆ ಕರೊನಾ ಸೋಂಕು ತಗುಲಿದ್ದು, ಶುಕ್ರವಾರ ಬ್ಯಾಂಕ್ ಸೀಲ್‌ಡೌನ್ ಮಾಡಲಾಗಿದೆ.

ಬ್ಯಾಂಕ್‌ಗೆ ತೆರಳಿದ್ದ ಗ್ರಾಹಕರಲ್ಲಿ ಆತಂಕ ಹೆಚ್ಚಾಗಿದೆ. ಸೋಂಕಿತ ವ್ಯಕ್ತಿಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿದ್ದರಿಂದ ಜೂ.24ರಂದು ನಗರದ ಫೀವರ್ ಕ್ಲೀನಿಕ್‌ಗೆ ತೆರಳಿ ಗಂಟಲು ದ್ರವ ಪರೀಕ್ಷೆಗೆ ನೀಡಿದ್ದರು. ಶುಕ್ರವಾರ ಬಂದ ವರದಿಯಲ್ಲಿ ಸೊಂಕು ದೃಢ ಪಟ್ಟಿರುವುದರಿಂದ ಬ್ಯಾಂಕ್ ಅನ್ನು ಸೀಲ್‌ಡೌನ್ ಮಾಡಿದ್ದು, ಸೋಂಕಿತನನ್ನು ಬಳ್ಳಾರಿಯ ಕೊವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಒಂಬತ್ತು ಸಿಬ್ಬಂದಿ ಮತ್ತು ಕುಟುಂಬದ ಇಬ್ಬರು ಮತ್ತು ಇನ್ನೊಬ್ಬ ವ್ಯಕ್ತಿ ಸೇರಿ 13 ಜನರನ್ನು ನಗರದ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ತಹಸೀಲ್ದಾರ್ ಎಸ್.ಬಿ.ಕೂಡಲಗಿ ತಿಳಿಸಿದ್ದಾರೆ. ತಾಲೂಕಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಟಿಎಚ್‌ಒ ಸುರೇಶ್‌ಗೌಡ, ಪಪಂ ಮುಖ್ಯಾಧಿಕಾರಿ ಕಂಪಳಮ್ಮ, ಹಿರಿಯ ಆರೋಗ್ಯ ಸಹಾಯಕ ಗಿರೀಶ್, ವೈದ್ಯ ಕೊಟ್ರೇಶ್, ಪಿಎಸ್‌ಐ ತಿಮ್ಮಪ್ಪನಾಯಕ, ಆರೋಗ್ಯ ಸಿಬ್ಬಂದಿ ಪ್ರವೀಣ್, ವಸಂತಕುಮಾರ್, ವಿಎಗಳಾದ ಎರ‌್ರಿಸ್ವಾಮಿ, ಶರಣಪ್ಪ, ಕೊಟ್ರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net