

ವಿಜಯವಾಣಿ ಸುದ್ದಿ ಜಾಲ ಉಡುಪಿ
ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬೆಂಗಳೂರಿನ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಪತ್ನಿ ಶಿವಶ್ರೀ ಅವರೊಡನೆ ಕುಟುಂಬ ಸಮೇತರಾಗಿ ಭಾನುವಾರ ರಾತ್ರಿ ಉಡುಪಿ ಮಠಕ್ಕೆ ಆಗಮಿಸಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದರು.
ಶ್ರೀಪಾದರ ಅಪೇಕ್ಷೆಯಂತೆ ಶ್ರೀಕೃಷ್ಣನ ರಥೋತ್ಸವದಲ್ಲಿ ಪಾಲ್ಗೊಂಡ ತೇಜಸ್ವಿ ಸೂರ್ಯ ದಂಪತಿ, ಸೇರಿದ್ದ ಸಹಸ್ರ ಸಂಖ್ಯೆಯ ಭಕ್ತರೊಡನೆ ಸೇರಿ ಬ್ರಹ್ಮರಥ ಎಳೆದು ಸಂಭ್ರಮಿಸಿದರು.
ತೇಜಸ್ವಿ ಸೂರ್ಯ ಅವರ ಚಿಕ್ಕಪ್ಪ, ಬೆಂಗಳೂರಿನ ಬಸವನಗುಡಿಯ ಜನಪ್ರಿಯ ಶಾಸಕ ರವಿ ಸುಬ್ರಹ್ಮಣ್ಯಂ ಅವರಿಗೂ ಶ್ರೀಗಳು ಪ್ರಸಾದ ವಿತರಿಸಿದರು.
ಮಠದ ದಿವಾನ ನಾಗರಾಜ್ ಆಚಾರ್ಯ, ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಇತರರು ಉಪಸ್ಥಿತರಿದ್ದರು.