ರೈತರ ಜೀವನಕ್ರಮದ ಅವಹೇಳನ ಸರಿಯಲ್ಲ

web 5
Published on

ಬಣಕಲ್: ತೇಜಸ್ವಿ ಅವರ ಕಾದಂಬರಿಗಳು ಓದುಗನಿಗೆ ಹೊಸ ದೃಷ್ಟಿಕೋನ ನೀಡುತ್ತವೆ. ನಾವು ವಿಚಾರವನ್ನು ಕಾಣುವ ಮೂಲಕ ವೈಚಾರಿಕವಾಗಿ ಜಗತ್ತನ್ನು ನೋಡಬೇಕಿದೆ ಎಂದು ವಿಮರ್ಶಕ ಡಾ. ಎಂ.ಜಿ.ಹೆಗಡೆ ಹೇಳಿದರು.

ಕೋಶ ಓದು ದೇಶ ನೋಡು ಬಳಗ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ‘ತೇಜಸ್ವಿ ಜತೆ ಯುವ ಜನರ ಸಾಂಸ್ಕೃತಿಕ ಪಯಣ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ರೈತರನ್ನು ಉತ್ಪಾದಕರಾಗಿ ನೋಡಲಾಗುತ್ತಿದೆಯೇ ಹೊರತು ಗ್ರಾಹಕರಾಗಿ ನೋಡುತ್ತಿಲ್ಲ. ರೈತರ ಜೀವನ ಕ್ರಮವನ್ನು ಅವಮಾನಿಸಲಾಗುತ್ತಿದೆ. ರೈತರು ಚಳವಳಿ ನಡೆಸುತ್ತಿರುವಾಗ ಪಾಯಸ ತಿನ್ನುತ್ತಾರೆ. ಅವರ ಬಳಿ ಕಾರು, ಜೀಪುಗಳಿವೆ. ಹಾಗಾದರೆ ಅವರು ರೈತರೇ ಎಂದು ಪ್ರಶ್ನಿಸಲಾಗುತ್ತದೆ. ಆದರೆ ಈ ಪ್ರಶ್ನೆಯ ಮೂಲಕವೇ ರೈತರ ಜೀವನಕ್ರಮವನ್ನು ಅವಮಾನಿಸಲಾಗುತ್ತಿದೆ. ಅವರ ಊಟವೂ ಈಗ ಕೆಲ ಜನರ ಹೊಟ್ಟೆಕಿಚ್ಚಿಗೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಕೀಲ ಸá-ಧೀರ್​ಕುಮಾರ್ ಮುರೋಳ್ಳಿ ಮಾತನಾಡಿ, ನಮ್ಮ ಮಾಧ್ಯಮಗಳು ರೈತರ ಪ್ರತಿಭಟನೆಯನ್ನು ಪರಿಗಣಿಸುತ್ತಿಲ್ಲ. ಚಳವಳಿ, ಚಳವಳಿಕಾರರು, ಹೋರಾಟ, ಹೋರಾಟಗಾರರನ್ನು ಶಂಕಿಸುತ್ತಿರುವುದು ವಿಷಾದನೀಯ ಎಂದರು.

ತೇಜಸ್ವಿ ಒಡನಾಡಿ ಬಾಪು ದಿನೇಶ್, ಸಹಮತ ಸಂಸ್ಥೆಯ ಐವನ್ ಡಿಸಿಲ್ವ, ಯುವಜನ ಮುಖಂಡರಾದ ಮುನೀರ್ ಕಾಟಿಪಳ್ಳ, ಲೇಖಕ ಪೂರ್ಣೆಶ್ ಮತ್ತಾವರ, ನವೀನ್ ಮಂಡಗದ್ದೆ, ವಿನೀತ್ ದೇವಾಡಿಗ, ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ಆಕರ್ಷ್, ಸಿಬ್ಬಂದಿ ಸತೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net