

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ತೇಜಸ್ವಿನಗರದ ಅನುದಾನಿತ ತೇಜಸ್ವಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮಾನ್ಯತೆಯನ್ನು ರದ್ದು ಮಾಡಿ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಆದೇಶ ಹೊರಡಿಸಿದ್ದಾರೆ. ತೇಜಸ್ವಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಇಲ್ಲದಿರುವುದರಿಂದ ಆದೇಶ ರದ್ದು ಮಾಡಲಾಗಿದೆ. ಈಗಿರುವ ಮಕ್ಕಳ ಪ್ರವೇಶಾತಿಯನ್ನು ಬೇರೆ ಕಡೆಗೆ ಪಡೆಯಲು ಸಂಬ0ಧಪಟ್ಟವರಿಗೆ ತಿಳಿಸಲಾಗಿದೆ. ಶಾಲೆಯಲ್ಲಿ ಪ್ರವೇಶ ಪಡೆದು ಮಕ್ಕಳ ಶಿಕ್ಷಣ ಮುಂದುವರಿಸಿದರೆ ಪಾಲಕರೇ ಜವಾಬ್ದದಾರರು ಎಂದು ಡಿಡಿಪಿಐ ಎಸ್.ಎಸ್. ಕೆಳದಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ