ವೈಜ್ಞಾನಿಕ ದೃಷ್ಟಿಕೋನ ಅಗಾಧ

bkt-3-5
ನವನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ತೇಜಸ್ ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಎರಡು ದಿನಗಳವರೆಗೆ ಹಮ್ಮಿಕೊಂಡಿದ್ದ ಸಿಬಿಎಸ್‌ಇ ಪ್ರಾದೇಶಿಕ ವಿಜ್ಞಾನ ವಸ್ತು ಪ್ರದರ್ಶನವನ್ನು ತೇಜಸ್ ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷತೆ ಮಾಧುರಿ ಮುಧೋಳ ಉದ್ಘಾಟಿಸಿದರು. ತೇಜಸ್ ಶಿಕ್ಷಣ ಸಂಸ್ಥೆಯ ಸಿಬಿಎಸ್ಸಿ ಮುಖ್ಯೋಪಾಧ್ಯಾಯ ಸಚಿನ ಬಾತ್ರಾ, ವಸ್ತು ಪ್ರದರ್ಶನದಲ್ಲಿ ತೀರ್ಪುಗಾರರಾದ ನೀಲಕಂಠಯ್ಯ ಎಂ ಕೂಗಲಿ, ಶಶಿಕಾಂತ ಬಾರ್ಕೆರ, ಡಾ.ಸಿದ್ದರಾಮ ಎಸ್.ಹಂಗರಗಿ, ಡಾ.ಪ್ರಸನ್ನ ಎಸ್‌ಎಂ, ಡಾ.ಚಂದ್ರಶೇಖರಯ್ಯ ಎಸ್ ಹಿರೇಮಠ, ರಜಿಯಾಬೇಗಂ ರೋಣ ಸೇರಿದಂತೆ ಇತರರು ಇದ್ದರು.
Published on

ಬಾಗಲಕೋಟೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿನ ವಿದ್ಯಾರ್ಥಿಗಳ ತಾರ್ಕಿಕ ಶಕ್ತಿ ಮತ್ತು ವೈಜ್ಞಾನಿಕ ದೃಷ್ಟಿಕೋನ ಅತ್ಯಂತ ಅಗಾಧವಾದದ್ದು ಎಂದು ತೇಜಸ್ ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಮಾಧುರಿ ಮುಧೋಳ ಹೇಳಿದರು.
ನವನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ತೇಜಸ್ ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಿಬಿಎಸ್‌ಇ ಪ್ರಾದೇಶಿಕ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ವೈಜ್ಞಾನಿಕ ಸಂಶೋಧನೆ, ಆವಿಷ್ಕಾರವು ರಾಷ್ಟ್ರ ವಿಕಾಸಕ್ಕೆ ಸಹಾಯವಾಗುತ್ತದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂದರು.
ತೇಜಸ್ ಶಿಕ್ಷಣ ಸಂಸ್ಥೆಯ ಸಿಬಿಎಸ್ಸಿ ಮುಖ್ಯೋಪಾಧ್ಯಾಯ ಸಚಿನ ಬಾತ್ರಾ ಮಾತನಾಡಿ, ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ತೇಜಸ್ ಶಾಲೆ ಹೆಚ್ಚಿನ ಆಸಕ್ತಿ ವಹಿಸಿದೆ ಎಂದು ಹೇಳಿದರು.
ಈ ಪ್ರದರ್ಶನದಲ್ಲಿ ನೂರಕ್ಕೂ ಹೆಚ್ಚು ಶಾಲೆಗಳು ಮಕ್ಕಳು ಕರ್ನಾಟಕದ ವಿವಿಧ ಜಿ¯್ಲೆಗಳಿಂದ ಬಂದು ಭಾಗವಹಿಸಿದ್ದವು. ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದ ವಿವಿಧ ರೀತಿಯ ಮಾದರಿಗಳು ಪ್ರದರ್ಶನಗೊಂಡವು. ನೊಡುಗರ ಮನಸೆಳೆದವು.
ವಸ್ತು ಪ್ರದರ್ಶನದಲ್ಲಿ ತೀರ್ಪುಗಾರರಾದ ನೀಲಕಂಠಯ್ಯ ಎಂ ಕೂಗಲಿ, ಶಶಿಕಾಂತ ಬಾರ್ಕೆರ, ಡಾ.ಸಿದ್ದರಾಮ ಎಸ್.ಹಂಗರಗಿ, ಡಾ.ಪ್ರಸನ್ನ ಎಸ್‌ಎಂ, ಡಾ.ಚಂದ್ರಶೇಖರಯ್ಯ ಎಸ್ ಹಿರೇಮಠ, ರಜಿಯಾಬೇಗಂ ರೋಣ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net