

ಹುಬ್ಬಳ್ಳಿ: ಅರ್ಜುನ ಗೊಥೆ (53), ಶಿವಂ ಕಾಟವೆ (28) ಅವರ ಉತ್ತಮ ಬ್ಯಾಟಿಂಗ್ ಹಾಗೂ ಸುಚೇತನ್ ಹರಿಹರ (22-3), ನಿತಾಂತ ಪಾವಸ್ಕರ (20-3) ಉತ್ತಮ ಬೌಲಿಂಗ್‌ನಿಂದ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ಎ ತಂಡವು ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿ ಎ ತಂಡದ ವಿರುದ್ಧ 47 ರನ್‌ಗಳಿಗಳಿಂದ ಜಯ ಗಳಿಸಿ, ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಇಲ್ಲಿಯ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂಡರ್ 16 ಇಂಟರ್ ಕ್ಲಬ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿ ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ತೇಜಲ್ ಶಿರಗುಪ್ಪಿ ಕ್ರಿಕೆಟ್‌ಅಕಾಡಮಿ ಎ ತಂಡವು 40.4 ಓವರ್‌ನಲ್ಲಿ 149ಕ್ಕೆ ಆಲ್‌ಔಟ್ ಆಯಿತು. ತಂಡದ ಪರ ಅರ್ಜುನ ಗೊಥೆ 53, ಶಿವಂ ಕಾಟವೆ 28, ನಿತಾಂತ ಪಾವಸ್ಕರ 16 ರನ್ ಗಳಿಸಿದರು. ಲೀಲಾಕೃಷ್ಣ 32-3, ಅಣ್ಣಪ್ಪ ಹೊಸಮನಿ 28-2, ನವಾಜ ಶಿಬಾರಗಟ್ಟಿ 23-2ವಿಕೆಟ್ ಪಡೆದರು.
ನಂತರ ಬ್ಯಾಟಿಂಗ್ ಮಾಡಿದ ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿ 45.4 ಓವರ್‌ನಲ್ಲಿ 102 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ತಂಡದ ಪರ ಶಲೊಕ ಮಹಾಲೆ 32 ರನ್ ಗಳಿಸಿದರು. ಸುಚೇತನ್ ಹರಿಹರ 22-3, ನಿತಾಂತ ಪಾವಸ್ಕರ 20-3, ಹರೀಶಗೌಡ ತೋಟದ 15-2 ವಿಕೆಟ್ ಪಡೆದರು.