ತೇಜಲ್ ಕ್ರಿಕೆಟ್ ಅಕಾಡೆಮಿ ಚಾಂಪಿಯನ್

jai hanuman
Published on

ಹುಬ್ಬಳ್ಳಿ: ನಗರದ ಶಿವಾನಂದ ಗುಂಜಾಳ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ 14 ವಯೋಮಿತಿಯ ಟ್ವೆಂಟಿ-20 ಬಾಲಕರ ಜೈಹನುಮಾನ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ತೇಜಲ್ ಕ್ರಿಕೆಟ್ ಅಕಾಡೆಮಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಪಂದ್ಯಾವಳಿಯ ಫೈನಲ್​ನಲ್ಲಿ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಬಿ ತಂಡ ಎದುರಿಸಿದ ತೇಜಲ್ ಕ್ರಿಕೆಟ್ ಅಕಾಡೆಮಿ ತಂಡ 4 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಬಿ ತಂಡ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 76 ರನ್ ಗಳಿಸಿತ್ತು. ಸಿದ್ಧಾರ್ಥ ಟಿ. 34, ಪ್ರಣವ್ ಜೆ. 15 ರನ್ ಗಳಿಸಿದರು. ತೇಜಲ್ ಅಕಾಡೆಮಿಯ ಶಿವಂ ಕಾಟವೆ(16ಕ್ಕೆ 2 ವಿಕೆಟ್) ಹಾಗೂ ಆಲೋಕ ಜಿ. (14ಕ್ಕೆ 1 ವಿಕೆಟ್) ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.

ಬೆನ್ನತ್ತಿದ್ದ ತೇಜಲ್ ಕ್ರಿಕೆಟ್ ಅಕಾಡೆಮಿ 9.5 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 78 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಶಿವಂ ಕಾಟವೆ 27 ಹಾಗೂ ಆಲೋಕ ಜಿ. 37 ರನ್ ಗಳಿಸಿದರು. ಶಿವಂ ಕಾಟವೆ ಸರಣಿ ಶ್ರೇಷ್ಠ, ಪ್ರಣವ್ ಜೆ. ಉತ್ತಮ ಬ್ಯಾಟರ್, ರಮೇಶ ಸಿಂಗ್ ಜಮಾದಾರ ಉತ್ತಮ ಬೌಲರ್ ಮತ್ತು ಆರುಷ ಹತ್ತಿಕಾಳ ಉತ್ತಮ ವಿಕೆಟ್ ಕೀಪರ್ ಪ್ರಶಸ್ತಿಗೆ ಭಾಜನರಾದರು. ಸಮಾಜ ಸೇವಕ ಡಾ.ರಮೇಶ ಮಹದೇವಪ್ಪನವರ ಹಾಗೂ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜು ಕಾಳೆ ಪ್ರಶಸ್ತಿ ಪ್ರದಾನ ಮಾಡಿದರು. ಶಿವಾನಂದ ಗುಂಜಾಳ, ರಘುರಾಮ ರಾಯಚೂರ, ಪ್ರಕಾಶ ಹೊನ್ನವಾಡ, ಪುಂಡಲೀಕ ರಾಠೋಡ, ಜಾನ್ ವೆಸ್ಲಿ, ಆನಂದ ಕಾಳೆ, ವಿಜಯ, ಮಲ್ಲೇಶಿ, ಬಸವರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net