

ಸರಗೂರು : ತಾಲೂಕಿನಾದ್ಯಂತ ಎರಡು ದಿನಗಳಿಂದ ನಿರಂತವಾಗಿ ಮಳೆ ಸುರಿಯುತ್ತಿರುವುದಿರಂದ ಕಬಿನಿ ಮತ್ತು ನುಗು ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ನದಿಗೆ ಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ನದಿ ದಡದಲ್ಲಿರುವ ಗ್ರಾಮಗಳಿಗೆ ಸೋಮವಾರ ತಹಸೀಲ್ದಾರ್ ರುಕೀಯಾ ಬೇಗಂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುನ್ನಪಟ್ಟಣ, ಇಟ್ನ, ಸರಗೂರು ಟೌನ್, ಮುಳ್ಳೂರು, ಹಲಸೂರು, ಕಲ್ಲಂಬಾಳು ಇನ್ನೂ ಹಲವು ಗ್ರಾಮಗಳಿಗೆ ತೆರಳಿದ ರುಕೀಯಾ ಬೇಗಂ ಅವರು ಗ್ರಾಮದ ಜನರಿಗೆ ಮುಂಜಾಗ್ರತೆ ಕ್ರಮ ವಹಿಸುವಂತೆ ಮನವರಿಕೆ ಮಾಡಿದರು.
ಕಬಿನಿ ಜಲಾಶಯದಿಂದ ನದಿಗೆ ನೀರು ಬಿಡಲಾಗಿದೆ. ಅದರಿಂದ ಅಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ನದಿ ದಡದಲ್ಲಿ ಮಹಿಳೆಯರು ಬಟ್ಟೆ ತೊಳೆಯುವುದು, ರೈತರು ದನಕರುಗಳನ್ನು ತೊಳೆಯುವ ನಿಟ್ಟಿನಲ್ಲಿ ಅವರಿಗೆ ಮನವರಿಕೆ ಮಾಡಿಕೊಡಬೇಕು. ಹೆಚ್ಚು ನೀರು ಬರುವುದರಿಂದ ಅವಘಡ ಸಂಭವಿಸಬಹುದು. ಆದ್ದರಿಂದ ಯಾರು ಕೂಡ ನದಿ ದಡಕ್ಕೆ ತೆರಳ ಬಾರದು ಎಂದು ಮನವಿ ಮಾಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ಜಯರಾಮ್, ಪಿಡಿಒ ಚಿನ್ನಸ್ವಾಮಿ, ಗ್ರಾಮ ಲೆಕ್ಕಾಕಾರಿ ಕುಮಾರ್ ಇತರರು ಇದ್ದರು.