ದೇವರ ಗುಡಿಹಾಳಕ್ಕೆ ತಹಸೀಲ್ದಾರ್ ಭೇಟಿ

20-DEVARAGUDIHAL-1
Published on

ಹುಬ್ಬಳ್ಳಿ: ತಾಲೂಕಿನ ದೇವರ ಗುಡಿಹಾಳ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ಬಾಪೂಜಿ ಸೇವಾ ಕೇಂದ್ರ ಮತ್ತು ಗ್ರಾಮ ಒನ್ ಕೇಂದ್ರಕ್ಕೆ ಗುರುವಾರ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ ಮತ್ತು ತಾಪಂ ಇಒ ರಾಮಚಂದ್ರ ಹೊಸಮನಿ ಭೇಟಿ ನೀಡಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹ ಜ್ಯೋತಿ ಯೋಜನೆ ಅರ್ಜಿ ಸ್ವೀಕರಿಸುವುದನ್ನು ಪರಿಶೀಲಿಸಿದರು.

ಗೃಹಲಕ್ಷ್ಮಿ ಯೋಜನೆ ಅರ್ಜಿಗಳನ್ನು ಉಚಿತವಾಗಿ ಸ್ವೀಕರಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಲು ತಿಳಿಸಿ ಸರ್ಕಾರದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು ಸಾರ್ವಜನಿಕರಿಗೆ ವಿನಂತಿಸಿದರು. ಪಿಡಿಒ ಎಚ್.ಎಫ್. ಕಲಹಾಳ, ಗ್ರಾಪಂ ಅಧ್ಯಕ್ಷೆ ಲಲಿತಾ ವಾಲಿಕಾರ, ಉಪಾಧ್ಯಕ್ಷೆ ಪಾರ್ವತಿ ಅರ್ಜಿ, ಸದಸ್ಯರಾದ ಯಲ್ಲಪ್ಪ ದಾಸರ, ದುರ್ಗಪ್ಪ ಹರಿಜನ, ಖಾತುನಬಿ ಲಾಡಸಾಬನವರ, ರಾಯಸಾಬ್ ಮುಲ್ಲಾನವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net