ದುಶ್ಚಟಗಳನ್ನು ಜೋಳಿಗೆಯಲ್ಲಿ ಹಾಕಿಸಿಕೊಂಡ ತಹಸೀಲ್ದಾರ್

Tehsildar who put the evils in the bag
ಇಳಕಲ್ಲದಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನ ನಿಮಿತ್ತ ತಹಸೀಲ್ದಾರ್ ಸತೀಶ ಕೂಡಲಗಿ ಅವರು ಜೋಳಿಗೆ ಹಿಡಿದು ದುಶ್ಚಟಗಳನ್ನು ಹಾಕಿಸಿಕೊಂಡರು. ಅಕ್ಕನ ಬಳಗ ಅಧ್ಯಕ್ಷೆ ಸುವರ್ಣ ಗೊಂಗಡಶೆಟ್ಟಿ, ಸುನೀತಾ ಅಂಗಡಿ ಇತರರಿದ್ದರು.
Published on

ಇಳಕಲ್ಲ: ಡಾ. ಮಹಾಂತ ಶಿವಯೋಗಿಗಳ ಜನ್ಮದಿನ ನಿಮಿತ್ತ ಗುರುವಾರ ತಾಲೂಕು ತಹಸೀಲ್ದಾರ್ ಸತೀಶ ಕೂಡಲಗಿ ನೇತೃತ್ವದಲ್ಲಿ ಅಕ್ಕನ ಬಳಗದ ಸದಸ್ಯರು ಪಟ್ಟಣದಲ್ಲಿ ಸಂಚರಿಸಿ ದುಶ್ಚಟಗಳನ್ನು ಜೋಳಿಗೆಯಲ್ಲಿ ಹಾಕಿಸಿಕೊಳ್ಳುವ ಮೂಲಕ ವ್ಯಸನಮುಕ್ತ ದಿನ ಆಚರಿಸಿದರು.

ಶ್ರೀಮಠದ ಹಿಂದುಗಡೆಯ ವಿನಾಯಕನಗರ, ಮಹಾಂತೇಶ ಸ್ಲಂ ಸೇರಿ ವಿವಿಧ ಬಡಾವಣೆಗಳ ಮನೆ ಮನೆಗಳಿಗೆ ತೆರಳಿ ಗುಟ್ಖಾ, ತಂಬಾಕು, ಧೂಮಪಾನ, ಮದ್ಯಪಾನ ಮತ್ತಿತರ ದುಶ್ಚಟಗಳನ್ನು ಜೋಳಿಗೆಗಳಲ್ಲಿ ಹಾಕಿಸಿಕೊಂಡು ಅವುಗಳಿಂದಾಗುವ ಅನಾಹುತಗಳ ಕುರಿತು ಕರಪತ್ರ ಹಂಚಿದರು.

ಶ್ರೀಮಠದ ಭಕ್ತರಾದ ಶಾಂತಣ್ಣ ಸರಗಣಾಚಾರಿ, ಮಹಾಂತೇಶ ಗಜೇಂದ್ರಗಡ, ಸಚಿನ್ ಸಾಲಿಮಠ, ಮಾಂತೇಶ ಹನುಮನಾಳ, ಅಕ್ಕನ ಬಳಗದ ಅಧ್ಯಕ್ಷೆ ಸುವರ್ಣ ಗೊಂಗಡಶೆಟ್ಟಿ, ಕಾರ್ಯದರ್ಶಿ ಸುನೀತಾ ಅಂಗಡಿ, ಖಜಾಂಚಿ ಸವಿತಾ ಶಿವಬಲ್, ಸದಸ್ಯೆಯರಾದ ಗಿರೀಜಾ ಶಿವಬಲ್, ಶಾರದಾ ಸೂಡಿ, ಸವಿತಾ ಮಾಟೂರ, ಅನುಶಿಯಾ ಅಂಗಡಿ, ಶಾಂತಾ ಸಜ್ಜನ, ರಾಜೇಶ್ವರಿ ಶಿವಬಲ್, ಕವಿತಾ ಪಟ್ಟಣಶೆಟ್ಟಿ, ಭಾರತಿ ಶೆಟ್ಟರ್, ವಿಶಾಲಾಕ್ಷಿ ಶೆಟ್ಟರ್, ಈರಮ್ಮ ಕುಂಬಾರ, ಸವಿತಾ ಗೊಂಗಡಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net