

ಸುರಪುರ: ಹೊರ ರಾಜ್ಯದಲ್ಲಿ ಹೊಟ್ಟೆಪಾಡಿಗಾಗಿ ದುಡಿಯಲು ತೆರಳಿದ ತಾಲೂಕಿನ ಜನತೆ ಮರಳಿ ಕರೆತರಲು ಸರ್ಕಾರ ನಿರ್ಧರಿಸಿದ್ದು, ಕಾರಣ ನಮ್ಮ ತಾಲೂಕಿಗೆ ಬರುವ ಮುಂಚೆಯ ಅವರ ಆರೋಗ್ಯ ದೃಷ್ಠಿ ಮತ್ತು ತಾಲೂಕು ಹಸಿರು ವಲಯದಲ್ಲಿ ಇರಿಸಲು ಎಲ್ಲ ರೀತಿಯಿಂದಾಗಿ ಸನ್ನದ್ಧರಾಗಬೇಕು ಎಂದು ತಹಸೀಲ್ದಾರ್ ನಿಂಗಣ್ಣ ಬಿರಾದಾರ ಹೇಳಿದರು.
ತಹಸಿಲ್ ಕಚೇರಿಯಲ್ಲಿ ಕರೆದಿದ್ದ ಕರೊನಾ ಟಾಸ್ಕ್ಫೋಸರ್್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಈಗಾಗಲೇ ಸರ್ಕಾರ ನೀಡಿರುವ ಮಾರ್ಗಸೂಚಿಯಂತೆ ಎಲ್ಲ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಅದರಂತೆ ಈಗ ಹೊರ ರಾಜ್ಯದಲ್ಲಿ ನಮ್ಮ ತಾಲೂಕಿನವರು ಎಷ್ಟು ಜನರಿದ್ದಾರೆ ಎನ್ನುವುದು ನಿಖರ ಮಾಹಿತಿ ಇಲ್ಲ. ಆದರೂ ಕೂಡಾ ನಮ್ಮ ಜನರ ರಕ್ಷಣೆಗೆ ಬೇಕಾಗುವ ಕ್ವಾರಂಟೈನ್ ವಾರ್ಡ್ ಮತ್ತು ಆರೋಗ್ಯ ತಪಾಸಣೆಗೆ ಬೇಕಾಗುವ ಎಲ್ಲ್ಲ ಅಗತ್ಯ ಕ್ರಮ ವಹಿಸಲಾಗಿದೆ ಎಂದರು.
ಸಭೆಯಲ್ಲಿ ಉಪ ತಹಸೀಲ್ದಾರ್ ಸೂಫಿಯಾ ಸುಲ್ತಾನ್, ತಾಪಂ ಇಒ ಅಂಬ್ರೇಶ್, ವೈದ್ಯಾಧಿಕಾರಿ ಡಾ.ಆರ್.ವಿ.ನಾಯಕ, ಪಿಐ ಎಸ್.ಎಂ.ಪಾಟೀಲ್, ಪೌರಾಯುಕ್ತ ಜೀವನ ಕುಮಾರ ಇತರರಿದ್ದರು.