

ಗಜೇಂದ್ರಗಡ: ಕಂದಾಯ ಇಲಾಖೆ ನೌಕರರು ತಮ್ಮ ವಿರುದ್ಧ ತಿರುಗಿ ಬಿದ್ದಿರುವುದು ರಾಜಕೀಯ ಪ್ರೇರಿತವಾಗಿದೆ. ಇದಕ್ಕೆಲ್ಲ ಬೆದರುವುದಿಲ್ಲ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡುರವ ಅವರು, ಪ್ರತಿಭಟನೆ ದಿನ ಮನವಿ ನೀಡಲು ಹೋದಾಗ 15 ನಿಮಿಷವಾದರೂ ದುರುದ್ದೇಶದಿಂದ ಹಾಗೂ ರಾಜಕೀಯ ರಾಜಕೀಯ ಒತ್ತಡದಿಂದ ತಹಸೀಲ್ದಾರ್ ಸ್ಥಳಕ್ಕೆ ಬರಲಿಲ್ಲ. 3 ಬಾರಿ ಪೋಲಿಸರು ಹೋಗಿ ಕರೆದರೂ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಅವರು ಬಂದಾಗ ಮಲಗಿದ್ದೀರಾ? ಎಂದು ಕೇಳಿದ್ದೇನೆ. ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿಲ್ಲ, ವೈಯಕ್ತಿಕವಾಗಿ ನಿಂದನೆ ಮಾಡಿಲ್ಲ. ಮಾಡಿದ್ದು ತೋರಿಸಲಿ. ಇದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಬಂಡಿ ತಿರುಗೇಟು ನೀಡಿದ್ದಾರೆ.
ಇದೆಲ್ಲ ಕಾಂಗ್ರೆಸ್ ಪಕ್ಷದವರ ಹುನ್ನಾರ. ಎಲ್ಲರಿಗೂ ಹೇಳಿ ಅವರೇ ಮನವಿ ಕೊಡಿಸುತ್ತಿದ್ದಾರೆ. ವೈಯಕ್ತಿಕವಾಗಿ ಎಲ್ಲ ಇಲಾಖೆ ಅಧಿಕಾರಿಗಳಿಗೆ ಕರೆದು ಕೇಳಲಿ, ಯಾರು ಸರಿ ಯಾರದು ತಪ್ಪು ಎಂಬುದು ಗೊತ್ತಾಗುತ್ತದೆ. ಇಂತಹದಕ್ಕೆಲ್ಲ ಬೆದರುವ ಮಾತಿಲ್ಲ. ಪ್ರತಿದಿನ ಹಲವಾರು ರೈತರು ನಮ್ಮ ಮನೆಗೆ ಬಂದು ಕಂದಾಯ ಇಲಾಖೆ ಅಧಿಕಾರಗಳು ಲಂಚಗುಳಿತನ ದೂರುಗಳನ್ನು ನೀಡುತ್ತಿದ್ದಾರೆ. ಆ ಬಗ್ಗೆ ತಹಸೀಲ್ದಾರ್ ಅವರಿಗೆ ತಿಳಿಹೇಳುತ್ತಾ ಬಂದಿದ್ದೇನೆ. ಆದರೆ, ತಹಸೀಲ್ದಾರ್ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಆರೋಪಿಸಿದರು.