

ಮಂಡ್ಯ: ಸೋಮವಾರ ರಾತ್ರಿ ಸುರಿದ ಅಕಾಲಿಕ ಆಲಿಕಲ್ಲು ಮಳೆ, ಬಿರುಗಾಳಿಯಿಂದಾಗಿ ನೂರಾರು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಗಳು ಹಾನಿಯಾಗಿರುವ ಹಿನ್ನೆಲೆಯಲ್ಲಿ ತಾಲೂಕಿನ ಸಾತನೂರು ಗ್ರಾಮಕ್ಕೆ ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ಗಾಳಿ ಮತ್ತು ಮಳೆಗೆ ಕಬ್ಬು ನೆಲಕ್ಕಚಿವೆ. ಅದೇ ರೀತಿ ಆಲಿಕಲ್ಲು ಮಳೆಗೆ ಕಬ್ಬಿನ ಗರಿ ಮತ್ತು ಸುಳಿ ನಾಶವಾಗಿದೆ. ಆದ್ದರಿಂದ ರೈತರು ಸೂಕ್ತ ದಾಖಲೆಗಳನ್ನೂ ನೀಡಬೇಕು. ಕೃಷಿ ಇಲಾಖೆ ಮತ್ತು ತಾಲೂಕು ಆಡಳಿತ ಜಂಟಿಯಾಗಿ ತನಿಖೆ ಮಾಡಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.
ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್ ಮಾತನಾಡಿ, ಆಲಿಕಲ್ಲು ಮಳೆಗೆ ಸಾತನೂರು ಗ್ರಾಮದಲ್ಲಿ ವಿವಿಧ ಬೆಳೆಗಳು ನಾಶವಾಗಿದೆ. ತಾಲೂಕು ಆಡಳಿತಕ್ಕೆ ಗಮನಕ್ಕೆ ತಂದಾಗ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅದೇರೀತಿ ಕೃಷಿ ತ್ರಾಂತಿಕ ಇಲಾಖೆಯವರು ಶೇ.25ರಷ್ಟು ನಷ್ಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಆದ್ದರಿಂದ ಕೂಡಲೇ ನಷ್ಟದ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.
ಆರ್‌ಐ ಮನೋಹರ್, ವಿಎ ಲಿಖಿತಾ, ಗ್ರಾಮಸ್ಥರಾದ ಸಿ.ಅಶೋಕ್, ಜಯರಾಂ, ರವಿ, ಮಹೇಂದ್ರ, ಮರಿಸಿದ್ದಪ್ಪ, ಕೃಷ್ಣ, ಸುರೇಶ, ಸುನಿ, ಚಂದ್ರಶೇಖರ್, ಚಂದ್ರು ಹಾಜರಿದ್ದರು.