ಪತ್ರಕರ್ತರಿಗೆ ಆರ್ಥಿಕ ಭದ್ರತೆ ಬಹುಮುಖ್ಯ

Untitled design (1)
ಹಗರಿಬೊಮ್ಮನಹಳ್ಳಿ ಕನ್ಯಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಗುರುವಾರ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ತಹಸೀಲ್ದಾರ್ ಚಂದ್ರಶೇಖರ್ ಶಂಭಣ್ಣಗಾಳಿ ಉದ್ಘಾಟಿಸಿದರು. ತಾಪಂ ಇಒ ಪರಮೇಶ್ವರಪ್ಪ, ಸಂಘದ ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಲಕ್ಷ್ಮಣ, ಬಿಇಒ ಮೈಲೇಶ ಬೇವೂರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ಆಂಜನೇಯ ಹುಲ್ಲಾಳ್, ಕರ್ನಾಟಕ ಮಾಧ್ಯಮ ಆಕಾಡೆಮಿ ಸದಸ್ಯ ಕೆ.ನಿಂಗಜ್ಜ, ಶಾಸಕರ ಆಪ್ತ ಸಹಾಯಕ ಬಿ.ದೊಡ್ಡಬಸಪ್ಪ ರೆಡ್ಡಿ, ಸಂಘದ ತಾಲೂಕಾಧ್ಯಕ್ಷ ಉಮಾಪತಿ ಶೆಟ್ಟರ್ ಇದ್ದರು.
Published on

ಹಗರಿಬೊಮ್ಮನಹಳ್ಳಿ: ಪತ್ರಕರ್ತರ ಬದುಕು ಆರ್ಥಿಕ ಭದ್ರತೆಯಿಂದ ಕೂಡಿಲ್ಲ ಎಂದು ತಹಸೀಲ್ದಾರ್ ಚಂದ್ರಶೇಖರ್ ಶಂಭಣ್ಣಗಾಳಿ ಹೇಳಿದರು.

ಪಟ್ಟಣದ ಕನ್ಯಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ಸೌಲಭ್ಯಗಳ ಕೊರತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸದಲ್ಲಿ ಜೀವನದ ಭದ್ರತೆಯನ್ನು ಮರೆತಿದ್ದಾರೆ. ಆರ್ಥಿಕ ಭದ್ರತೆ ಬಹುಮುಖ್ಯವಾಗಿರುತ್ತದೆ. ಸರ್ಕಾರಗಳು ಮಾಧ್ಯಮದವರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಬುಡ್ಡಿ ಬಸವರಾಜ ಪ್ರಾಸ್ತಾವಿಕ ಮಾತನಾಡಿ, ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದು. ಆದರೆ ಕುಟುಂಬಗಳ ಸ್ವಾಸ್ತ್ಯವನ್ನು ಕಾಪಾಡಿಕೊಳ್ಳುವುದು ನಮ್ಮಿಂದ ಆಗುವುದಿಲ್ಲ. ಪತ್ರಕರ್ತರಲ್ಲಿ ನೂರಾರು ಸಮಸ್ಯೆಗಳಿವೆ. ಸುಭದ್ರ ಜೀವನ ನೆಡೆಸಲು ಎಂದಿಗೂ ಸಾಧ್ಯವಿಲ್ಲ. ಸೂರು ಇಲ್ಲದೇ ಪತ್ರಕರ್ತರು ಬದುಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಎಂ.ಎಂ.ಶಿವಪ್ರಕಾಶ್ ಉಪನ್ಯಾಸದಲ್ಲಿ ಮಾತನಾಡಿ, ಸಾಮಾಜಿಕ ಜಾಲತಾಣಗಳಿಂದಾಗಿ ಸುದ್ದಿಯ ಸತ್ಯಾ ಸತ್ಯತೆ ಬಗ್ಗೆ ಅನುಮಾನ ಪಡುವಂತಾಗಿದೆ. ಮೊಬೈಲ್ ಇದ್ದವರೆಲ್ಲ ಪತ್ರಕರ್ತರಾಗಿರುವುದು ದುರಂತ. ಪತ್ರಿಕೆಗಳನ್ನು ಹಿಡಿದು ಓದುವ ತಾಳ್ಮೆ ಯಾರಲ್ಲೂ ಇದ್ದಂತಿಲ್ಲ. ಆದರೂ ಪತ್ರಿಕೆಗಳಲ್ಲಿನ ವರದಿಗಳು ಸತ್ಯದಿಂದ ಕೂಡಿರುತ್ತವೆ. ಅಲ್ಲಿ ಮಾಹಿತಿ ಸಂಗ್ರಹಿಸಿ ಸುದ್ದಿ ಮಾಡಲಾಗುತ್ತದೆ ಎಂದರು.

ತಾಲೂಕಿನ 19 ಜನ ಆಂಬುಲೆನ್ಸ್ ಚಾಲಕರ ಸೇವೆಯನ್ನು ಗುರುತಿಸಿ ಪತ್ರಕರ್ತರ ಸಂಘದಿಂದ ಗೌರವಿಸಲಾಯಿತು. ತಾಪಂ ಇಒ ಪರಮೇಶ್ವರಪ್ಪ, ಸಂಘದ ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಲಕ್ಷ್ಮಣ, ಬಿಇಒ ಮೈಲೇಶ ಬೇವೂರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ಆಂಜನೇಯ ಹುಲ್ಲಾಳ್, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ, ಸಂಘದ ತಾಲೂಕು ಅಧ್ಯಕ್ಷ ಉಮಾಪತಿ ಶೆಟ್ಟರ್, ಕಾರ್ಯದರ್ಶಿ ಭೀಮರಾಜ್, ಖಜಾಂಚಿ ರಾಜಾವಲಿ ಗಡ್ಡದ್, ಪ್ರಮುಖರಾದ ವೀರೇಶ್ ಮಜ್ಗಿ, ಅಕ್ಕಂಡಿ ಬಸವರಾಜ್, ಬಿ.ಕೆ.ಬಸವರಾಜ್, ವಿಶ್ವನಾಥ ಬಾವಿಕಟ್ಟಿ ಇತರರಿದ್ದರು.

ಶಿಕ್ಷಕಿ ಶಾರದ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪತ್ರಕರ್ತರಾದ ಸಿ.ಶಿವಾನಂದ, ಜೆ.ನಾಗರಾಜ್, ಉಪ್ಪಾರ್ ಅಶೋಕ ಹಾಗೂ ಪಟ್ಟಣಶೆಟ್ಟಿ ಮಂಜುನಾಥ ಕಾರ್ಯಕ್ರಮವನ್ನು ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net