ವಿಶ್ವದಲ್ಲಿ ಕನ್ನಡಕ್ಕೆ ಭವ್ಯ ಇತಿಹಾಸ

JOTHIRATHA
ಯಲಬುರ್ಗಾ ತಾಲೂಕಿನ ಮುಧೋಳದಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಸ್ವಾಗತಿಸಲಾಯಿತು. ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಪಾಟೀಲ್, ಪಿಡಿಒ ವೀರಭದ್ರಗೌಡ ಮೂಲಿಮನಿ, ಗ್ರಾಪಂ ಸದಸ್ಯ ಬಸಪ್ಪ ಅಕ್ಕಿ ಇತರರಿದ್ದರು.
Published on

ಯಲಬುರ್ಗಾ: ನಾಡು, ನುಡಿ, ಸಾಹಿತ್ಯ ಪರಂಪರೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.

ತಾಲೂಕಿನ ಮುಧೋಳದಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಸ್ವಾಗತಿಸಿ ಗುರುವಾರ ಮಾತನಾಡಿದರು. ಕರ್ನಾಟಕ ಸಂಭ್ರಮ-50ರ ಪ್ರಯುಕ್ತ ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನವೆಂಬರ್ ತಿಂಗಳಿಂದ ವರ್ಷವಿಡಿ ಕನ್ನಡ ಜ್ಯೋತಿ ರಥಯಾತ್ರೆ ಸಂಭ್ರಮ ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಜನರಲ್ಲಿ ಕಲೆ, ವಾಸ್ತುಶಿಲ್ಪ, ಭಾಷಾಭಿಮಾನ ಹೆಚ್ಚಿಸುವ ಕೆಲಸ ಮಾಡುತ್ತಿದೆ. ವಿಶ್ವದಲ್ಲಿ ಕನ್ನಡಕ್ಕೆ ಭವ್ಯ ಇತಿಹಾಸ, ಪರಂಪರೆ ಇದೆ ಎಂದರು.

ತಾಪಂ ಇಒ ಸಂತೋಷ ಪಾಟೀಲ್ ಮಾತನಾಡಿದರು. ಬೆಳಗ್ಗೆ ಕುಕನೂರಿನಿಂದ ಹೊರಟ ಜ್ಯೋತಿ ರಥಯಾತ್ರೆ ತಾಲೂಕಿನ ಸಂಗನಾಳ, ಕರಮುಡಿ, ಮುಧೋಳ ಗ್ರಾಮದಿಂದ ಪಟ್ಟಣಕ್ಕೆ ಆಗಮಿಸಿತು. ವಾದ್ಯಮೇಳ, ಡೊಳ್ಳು ಕುಣಿತ, ಚಿಣ್ಣರಿಂದ ವೇಷಭೂಷಣ, ನೃತ್ಯದ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಗ್ರೇಡ್-2 ತಹಸೀಲ್ದಾರ್ ನಾಗಪ್ಪ ಸಜ್ಜನ್, ಕಸಾಪ ತಾಲೂಕು ಅಧ್ಯಕ್ಷ ಬಾಲದಂಡಪ್ಪ ತಳವಾರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೈ.ಜಿ.ಪಾಟೀಲ್, ಅಧಿಕಾರಿಗಳಾದ ಕೆ.ಟಿ.ನಿಂಗಪ್ಪ, ಬೆಟದಪ್ಪ ಮಾಳೆಕೊಪ್ಪ, ನಿಂಗನಗೌಡ ಪಾಟೀಲ್, ಶಶಿಧರ ಸಕ್ರಿ, ಸಂಜಯ ಚಿತ್ರಗಾರ, ಎಂ.ದೇವರಡ್ಡಿ, ಪಿಡಿಒ ಕೆ.ಬಸವರಾಜ, ಗಣ್ಯರಾದ ವೀರಣ್ಣ ನಿಂಗೋಜಿ, ರಾಜಶೇಖರ ಶ್ಯಾಗೋಟಿ, ಶರಣಪ್ಪ ಪಾಟೀಲ್, ಶರಣಪ್ಪ ಕಟ್ಟೆಪ್ಪನವರ್, ವೀರಭದ್ರಗೌಡ ಮೂಲಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net