ತೆಗ್ಗಿಹಳ್ಳಿಯಲ್ಲಿ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ

Teggihalli, Siddhalingeshwar Jatra Mahotsav, Indi, Aminagada, Cholacugudda, Matoshree Parvathi Parameshwari Amma,
ಅಭಿನವ ಮುರುಘೇಂದ್ರ ಶ್ರೀಗಳು
Published on

ಇಂಡಿ: ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಸಿದ್ಧಲಿಂಗೇಶ್ವರ ಗವಿಮಠದಲ್ಲಿ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಅಮೀನಗಡದ ಚೋಳಚುಗುಡ್ಡ ವೇದಾಶ್ರಮದ ಮಾತೋಶ್ರೀ ಪಾರ್ವತಿ ಪರಮೇಶ್ವರಿ ಅಮ್ಮನವರಿಂದ ಕಳೆದ ನ.2 ರಿಂದ ಪ್ರತಿದಿನ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಜೀವನ ದರ್ಶನ ಪ್ರವಚನ ಪ್ರಾರಂಭವಾಗಿದ್ದು, 14 ರವರೆಗೆ ನಡೆಯಲಿದೆ.

ನ.14 ರಂದು ಬೆಳಗ್ಗೆ 7 ಗಂಟೆಗೆ ಹೋಮ-ಹವನ, ಲಿಂಗದೀಕ್ಷೆ, ಸಂಜೆ 4 ಗಂಟೆಗೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, 7 ಗಂಟೆಗೆೆ ಪ್ರವಚನ ಮುಕ್ತಾಯ ಸಮಾರಂಭ ಹಾಗೂ ಧರ್ಮಸಭೆ ಹಮ್ಮಿಕೊಳ್ಳಲಾಗಿದೆ. ಅದೇ ದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿಜಯಪುರದ ಸಿದ್ಧೇಶ್ವರ ಬ್ಲಡ್‌ಬ್ಯಾಂಕ್, ಅನುಗ್ರಹ ವಿಜನ್ ೌಂಡೇಷನ್ ಟ್ರಸ್ಟ್, ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ ವತಿಯಿಂದ ಕಣ್ಣಿನ ಉಚಿತ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ನ.15 ರಂದು ಸಿದ್ದಲಿಂಗೇಶ್ವರ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಬೀದಿಗಳಲ್ಲಿ ವಿವಿಧ ವಾದ್ಯವೃಂದ ಹಾಗೂ ರುದ್ರ ಪುರವಂತರ ಸೇವೆಯೊಂದಿಗೆ ಸಂಚರಿಸುತ್ತದೆ. ಸಂಜೆ 4 ಗಂಟೆಗೆ ಜಂಗಿ ನಿಕಾಲಿ ಕುಸ್ತಿ ಏರ್ಪಡಿಸಲಾಗಿದೆ. ಸಂಜೆ 5 ಗಂಟೆಗೆ ಸಿದ್ಧಲಿಂಗೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗುತ್ತದೆ. ಸಂಜೆ 7 ಗಂಟೆಗೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net