ಟೀ ಕುಡಿಸಿ ಸಹಪಾಠಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಯುವಕನ ಬಂಧನ

sexual assualt
Published on

ಬೆಂಗಳೂರು: ಸಹಪಾಠಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವಿದ್ಯಾರ್ಥಿಯನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ಅಮೀಬ್ ಬಂಧಿತ. ಯಲಹಂಕದ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಅಮೀಬ್, ಸಹಪಾಠಿ ಸಂತ್ರಸ್ತೆ ಜತೆ ಉತ್ತಮ ಒಡನಾಟ ಹೊಂದಿದ್ದ. ಪಠ್ಯಕ್ಕೆ ಸಂಬಂಧಿಸಿದ ಪುಸ್ತಕವೊಂದನ್ನು ಕೇಳಿದ್ದೆ. ರೂಮಲ್ಲಿದ್ದು, ಬಂದರೆ ಕೊಡುವುದಾಗಿ ಹೇಳಿದ. ರೂಮ್​ಗೆ ಹೋದಾಗ ಟೀ ನೀಡಿದ. ಕುಡಿದ ತಕ್ಷಣ ಪ್ರಜ್ಞೆ ಕಳೆದುಕೊಂಡೆ. ಆಗ ಅಮೀಬ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆ ದೂರು ನೀಡಿದ್ದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net