ಬದುಕಿನ ಎಲ್ಲ ಕ್ಷೇತ್ರ ಪ್ರವೇಶಿಸಿದ ತಂತ್ರಜ್ಞಾನ

New Kusugall new
Published on

ಹುಬ್ಬಳ್ಳಿ : ಇಂದಿನ ಜಾಗತೀಕರಣದ ಯುಗದಲ್ಲಿ ತಂತ್ರಜ್ಞಾನ ಪ್ರಗತಿಯು ಮಾನವನ ಬದುಕಿನ ಎಲ್ಲ ಕ್ಷೇತ್ರಗಳನ್ನೂ ರ್ಸ³ಸಿದೆ. ಶಿಕ್ಷಣ, ಉದೊ್ಯೕಗ, ವ್ಯಾಪಾರ, ಆಡಳಿತ, ಆರೋಗ್ಯ ಎಲ್ಲ ಕ್ಷೇತ್ರಗಳಲ್ಲೂ ಡಿಜಿಟಲ್ ತಂತ್ರಜ್ಞಾನ ಮುಖ್ಯ ಪಾತ್ರವಹಿಸಿದೆ ಎಂದು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕಿ ಸುಕನ್ಯಾ ಉಪ್ಪಿನ ಹೇಳಿದರು.

ಜಿಟಿಟಿಸಿ ಮತ್ತು ಅಟಲ್ ಟಿಂಕರಿಂಗ್ ಲ್ಯಾಬ್​ಗಳ ಸಹಯೋಗದಲ್ಲಿ ತಾಲೂಕಿನ ಕುಸುಗಲ್ಲ ಗ್ರಾಮದಲ್ಲಿ ಏರ್ಪಡಿಸಿದ್ದ ಕೌಶಲ್ಯ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಇ ಗವರ್ನನ್ಸ್ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ನಾಗರಿಕರು ಮತ್ತು ಅಧಿಕಾರಿಗಳು ಇ ಕೌಶಲ್ಯ ಹೊಂದಿರಬೇಕು. ಆನ್​ಲೈನ್ ಶಿಕ್ಷಣದ ಮೂಲಕ ವಿದ್ಯಾರ್ಥಿಗಳು ಯಾವುದೇ ಸ್ಥಳದಿಂದಲಾದರೂ ಜ್ಞಾನ ಪಡೆಯಬಹುದು. ಡಿಜಿಟಲ್ ಕೌಶಲ್ಯವು ವ್ಯಾಪಾರ ಮತ್ತು ಸ್ಟಾರ್ಟ್​ಅಪ್​ಗಳಲ್ಲಿ ನವೀನತೆ ತರಲು ಸಹಾಯ ನಾಡುತ್ತದೆ ಎಂದು ತಿಳಿಸಿದರು.

ಅತಿಥಿಯಾಗಿದ್ದ ಎಸ್​ಡಿಎಂಸಿ ಉಪಾಧ್ಯಕ್ಷ ಕಲ್ಲನಗೌಡ ಕೌಜಗೇರಿ ಮಾತನಾಡಿ, ಮಕ್ಕಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಕಲಿಯುವ ಹಂಬಲವಿರಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಮುಖ್ಯ ಗುರುಗಳಾದ ಐ.ಎಂ.ಇಳಕಲ್ಲ ಮಾತನಾಡಿ, ಇ ಕೌಶಲ್ಯಗಳು ಎಂದರೆ ಕಂಪ್ಯೂಟರ್, ಇಂಟರ್ನೆಟ್, ಮೊಬೈಲ್ ಅಪ್ಲಿಕೇಶನ್, ಡೇಟಾ ನಿರ್ವಹಣೆ, ಸೈಬರ್ ಸುರಕ್ಷತೆ, ಡಿಜಿಟಲ್ ಸಂವಹನ ಮುಂತಾದ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸುವ ಸಾಮರ್ಥ್ಯ ಡಿಜಿಟಲ್ ತಂತ್ರಜ್ಞಾನದಲ್ಲಿ ಪರಿಣಿತಿ ಹೊಂದಿದವರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರಕುತ್ತವೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಟಿಎಲ್ ಸಂಚಾಲಕಿ ಪ್ರೀತಾ ಫರ್ನಾಂಡಿಸ್, ಇ ಸೇವೆಗಳ ಮೂಲಕ ಗ್ರಾಮೀಣ ಪ್ರದೇಶಗಳ ಜನರು ಸಹ ಸರ್ಕಾರದ ಯೋಜನೆಗಳಿಗೆ ಸುಲಭವಾಗಿ ಪ್ರವೇಶಿಸಬಹುದು. ಈ ಹಿನ್ನೆಲೆಯಲ್ಲಿ ಇ ಕೌಶಲ್ಯಗಳು ಅಗತ್ಯವಾಗಿವೆ ಎಂದು ತಿಳಿಸಿದರು.

ಶಿಕ್ಷಕರಾದ ಭಾನುಮತಿ ಆಡಗಲ್ಲ, ಅಮೀರಾಬಾನು ದಲಾಲ, ಪಿ.ಕೆ. ಪತ್ತಾರ, ಲೋಕೇಶ ಡಿ., ಸುಮಾ, ಸಂಜೀವಕುಮಾರ ಭೂಶೆಟ್ಟಿ, ಸುರೇಶ ನಾಯಕ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net