ಡಾಟಾ ಸೈನ್ಸ್ ಓದಿದರೆ ಹೆಚ್ಚು ಉದ್ಯೋಗಾವಕಾಶ: ಮಹಾರಾಜ ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿ ಮುಖ್ಯಸ್ಥ ಡಾ.ಶರತ್‌ಕುಮಾರ್ ಹೇಳಿಕೆ

1 (1)
Published on

ಮಂಡ್ಯ: ಡಾಟಾ ಸ್ಯೆನ್ಸ್ ಮತ್ತು ಮಷಿನ್ ಲರ್ನಿಂಗ್ ಕಲಿಕೆ ಹೆಚ್ಚಿನ ಉದ್ಯೋಗಾವಕಾಶವನ್ನು ಒದಗಿಸುತ್ತವೆ ಎಂದು ಮಹಾರಾಜ ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿ ಮುಖ್ಯಸ್ಥ ಡಾ.ವೈ.ಎಚ್.ಶರತ್‌ಕುಮಾರ್ ಹೇಳಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನ ವಿಭಾಗದಿಂದ ಆಯೋಜಿಸಿದ್ದ ಟೆಕ್ನೋ ಬಡ್ಸ್ ಉದ್ಘಾಟಿಸಿ ಮಾತನಾಡಿದ ಅವರು, ಕಂಪ್ಯೂಟರ್ ವಿಜ್ಞಾನದ ವಿಷಯ ಇಂಡಿಯಾದಲ್ಲಿ ಒಂದು ಬೇಡಿಕೆಯ ವಿಷಯವಾಗಿದೆ. ಅದಕ್ಕೆ ಕಾರಣ ಜನರು ಬಳಸುತ್ತಿರುವ ಕಂಪ್ಯೂಟರ್ ಟೆಕ್ನಾಲಜಿಗಳಾದ ರೀಲ್ಸ್, ಇನ್‌ಸ್ಟಾಗ್ರಾಂ, ಇ ಕಾಮರ್ಸ್ ಆನ್‌ಲೈನ್ ಬುಕ್ಕಿಂಗ್‌ಗಳಾಗಿವೆ. ಇವೆಲ್ಲ ಒಂದೇ ಟಚ್‌ನಲ್ಲಿ ಜನರ ಅಗತ್ಯವನ್ನು ಪೂರೈಸುತ್ತಿವೆ. ಕಂಪ್ಯೂಟರ್ ಓದಿ ವಿದ್ಯಾರ್ಥಿಗಳು ಮನೆಯಲ್ಲಿ ಇದ್ದರೆ ವಿಷಯ ಮರೆತು ಹೋಗುತ್ತವೆ. ಆದ್ದರಿಂದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ತೊಡಗಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿರು.

ಕಾಲೇಜಿನ ಪ್ರಾಂಶುಪಾಲ ಡಾ.ಆರ್.ದಶರಥ ಮಾತನಾಡಿ, ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ತಿಳಿದುಕೊಳ್ಳಬೇಕು. ವ್ಯಾಸಂಗ ಮುಗಿದ ನಂತರ ಕಲಿತ ವಿದ್ಯೆಯನ್ನು ತಮ್ಮ ಜೀವನ ಉಪಯೋಗಕ್ಕೆ ಬಳಸಿಕೊಳ್ಳುವುದು ಬಹಳ ಮುಖ್ಯ. ರಾಜ್ಯಸರ್ಕಾರ ಕೌಶಲಾಭಿವೃದ್ದಿ ಮತ್ತು ಜೀವನೋಪಾಯ ಇಲಾಖೆ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ತರಬೇತಿ ನೀಡುತ್ತಿದೆ. ಅದರ ಸದುಪಯೋಗ ಪಡೆದುಕೊಳ್ಳಿ. ಕಂಪ್ಯೂಟರ್ ವಿಜ್ಞಾನ ಇಂದು ಬದುಕು ಕಟ್ಟಿಕೊಡುವ ವಿಷಯವಾಗಿದೆ ಎಂದರು.

ಕಾಲೇಜಿನ ಐಕ್ಯುಎಸಿ ಸಂಯೋಜಕಿ ಡಾ.ಹೇಮಲತಾ, ಗಣಕ ವಿಜ್ಞಾನ ಸಹಾಯಕ ಪ್ರಾಧ್ಯಾಪಕಿ ಪ್ರೊ.ಎಚ್.ಎಸ್.ನಾಗಲಕ್ಷ್ಮೀ, ವಿದ್ಯಾರ್ಥಿ ಕೃತಿಕಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net