ತಾಂತ್ರಿಕ ತರಬೇತಿ ವ್ಯಕ್ತಿತ್ವ ವಿಕಸನಕ್ಕೆ ಪೂರಕ

30 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪ್ರಮಾಣ ಪತ್ರವು ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಪಡೆದ ಅಂಕಗಳ ವಿವರಣೆ ಮಾತ್ರ. ಆದರೆ ಅಂಕಪಟ್ಟಿಯಿಂದ ವಿದ್ಯಾರ್ಥಿಯ ಕೌಶಲ ಅಳೆಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ತಾಂತ್ರಿಕ ತರಬೇತಿ ಪಡೆಯುವುದರಿಂದ ಅವರಲ್ಲಿ ವೃತ್ತಿ ಕೌಶಲದ ಜತೆಗೆ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಐಟಿಐ ಪ್ರಾಚಾರ್ಯ ಮಹಾವೀರ ಉಪಾಧ್ಯೆ ಹೇಳಿದರು.

ನಗರದ ವಿದ್ಯಾಗಿರಿ ಜೆಎಸ್​ಎಸ್​ನ ಶ್ರೀ ಮಂಜುನಾಥೇಶ್ವರ ಐಟಿಐ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಘಟಿಕೋತ್ಸವ ಸಮಾರಂಭದಲ್ಲಿ ಪ್ರಮಾಣಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಶ್ರೇಯೋಭಿವೃದ್ಧಿಗೆ ಈಗಾಗಲೇ ಐಟಿಐನಲ್ಲಿ ವಿವಿಧ ಕಂಪನಿಗಳ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಕಲಿಯುತ್ತಿರುವಾಗಲೇ ಗಳಿಕೆ ಆಧಾರದ ಮೇಲೆ ಆರ್ಥಿಕ ಸಹಾಯ ಸಹ ಮಾಡಲಾಗಿದೆ. ತಾಂತ್ರಿಕ ತರಬೇತಿ ನಂತರ ವಿದ್ಯಾರ್ಥಿಗಳನ್ನು ವಿವಿಧ ಕೈಗಾರಿಕೆಗಳಲ್ಲಿ ಆಹ್ವಾನಿಸಲ್ಪಡುವ ಅಪ್ರೆಂಟೈಸ್​ಶಿಪ್​ ತರಬೇತಿ ಪಡೆದುಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುವ ಬಗೆ, ಸಮಯ ಪ್ರಜ್ಞೆ, ಶಿಸ್ತು, ಬ್ಯಾಂಕ್​ ವ್ಯವಹಾರ, ವ್ಯಾಪಾರದ ಮಾಹಿತಿ ಕಲಿಯಬಹುದು ಎಂದರು.

ಮಹೇಶ ಬಡಿಗೇರ, ವಿದ್ಯಾ ಹಿರೇಮಠ, ಜೋಯೇಲ್​ ಯೊಹಾನ್​, ಲತಾ.ಸಿ, ಮಂಜುನಾಥ ಚಟ್ಟೇರ, ಇತರರು ಇದ್ದರು. ವಿನಾಯಕ ಗವಳಿ ನಿರೂಪಿಸಿದರು. ಚಂದ್ರಶೇಖರ ಬಡಿಗೇರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net