ಸ್ಪರ್ಧೆಗಳಿಂದ ತಾಂತ್ರಿಕ ಕೌಶಲ ವೃದ್ಧಿ

BLM
Published on

ಶಿರ್ವ: ಪ್ರಾಜೆಕ್ಟ್ ಸ್ಫರ್ಧೆಗಳಲ್ಲಿ ಭಾಗವಹಿಸುವುದರಿಂದ ಸ್ವಅಭಿವೃದ್ಧಿಗೆ ಅಮೂಲ್ಯವಾದ ಅವಕಾಶ ನೀಡಿದಂತಾಗುತ್ತದೆ ಅಲ್ಲದೆ ಇದು ತಾಂತ್ರಿಕ ಕೌಶಲ್ಯವನ್ನು ಬಲಪಡಿಸಿ ಉದ್ಯೋಗವನ್ನು ಪಡೆಯಲು ನೆರವಾಗುತ್ತದೆ ಎಂದು ಕಂಬಳ ಸೆಲ್ಯೂಷನ್ಸ್ ಪ್ರೈವೇಟ್ ಲಿ.ನ ಸಾಫ್ಟ್‌ವೇರ್ ಡೆವಲಪರ್ ಹರಿಪ್ರಸಾದ್ ಭಟ್ ಕೆ. ಹೇಳಿದರು.

ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಾಂಸ್ಕೃತಿಕ ಘಟಕ, ಹವ್ಯಾಸ ಪ್ರಾಜೆಕ್ಟ್ ಘಟಕ, ಐಎಸ್‌ಟಿಇ ವಿದ್ಯಾರ್ಥಿ ಘಟಕವು ಸಂಸ್ಥೆಯ ಇನ್ನೋವೇಶನ್ ಘಟಕದ ಸಹಯೋಗದೊಂದಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಟೆಕ್ನಿಕಲ್ ಪ್ರಾಜೆಕ್ಟ್ ಐಡಿಯೇಶನ್ ಎಂಬ ವಿಷಯದಡಿ ಆಯೋಜಿಸಿದ್ದ ಪ್ರಾಜೆಕ್ಟ್ ಪ್ರದರ್ಶನ ಮತ್ತು ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ವಾತನಾಡಿದರು.

ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಧಕೃಷ್ಣ ಐತಾಳ್ ಪ್ರಸ್ತಾವನೆಗೈದರು. ಸಂಸ್ಥೆ ಉಪ ಪ್ರಾಂಶುಪಾಲ ಡಾ.ಗಣೇಶ್ ಐತಾಳ್, ಡೀನ್‌ಗಳು, ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಇಂತಹ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಭಾಗವಹಿಸುವ ಮೂಲಕ ತಾಂತ್ರಿಕ ಕಲಿಕೆಯ ಪ್ರಯೋಜನವನ್ನು ಪಡೆಯಬೇಕು ಮತ್ತು ತಾಂತ್ರಿಕ ಕೌಶಲ್ಯ ಮತ್ತು ವಾಸ್ತವಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಹಾಯ ಮಾಡುತ್ತದೆ. -ಪ್ರಗತಿ ನಾಯಕ್, ಇಂಜಿನಿಯರ್, ಹಾರ್ಮನ್ ಇಂಡಿಯಾ ಇಂಟರ್‌ನ್ಯಾಷನಲ್ ಆಟೋಮೋಟಿವ್ https://www.vijayavani.net/students-benefit-from-ai-technology https://www.vijayavani.net/giriyaru-stream-silt-clearance-work-launched

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net