

ಬಾಗೇಪಲ್ಲಿ : ಮಾಸಿಕ ವೇತನ ಹೊರತುಪಡಿಸಿ ಶಿಕ್ಷಕರಿಗೆ ಸಿಗಬೇಕಾಗಿರುವ ಕನಿಷ್ಠ ಹಾಗೂ ಆರ್ಥಿಕ ಸೌಲಭ್ಯಗಳನ್ನು ನೀಡುವಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪಿ.ವೆಂಕಟರವಣಪ್ಪ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕಾರಿ ಸಮಿತಿ ಸಭೆ ಉದ್ಘಾಟಿಸಿ, ಕಳೆದ ಎರಡು ವರ್ಷಗಳಿಂದ ಶಿಕ್ಷಕರಿಗೆ ಬಾಕಿ ಇರುವ ಭರ್ತಿ ವೇತನದ ಬಿಡುಗಡಗೆ ಮುಂದಾಗುವ ಜತೆಗೆ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಬೇಕು. ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ವೈಧ್ಯಕೀಯ ವೆಚ್ಚದ ಮರುಪಾತಿ ಬಿಲ್‌ಗಳಿಗೆ ಮಂಜೂರಾತಿ ನೀಡಿ ಹಣ ಬಿಡುಗಡೆ ಮಾಡಿ ವೇತನದಲ್ಲಿ ನೂನ್ಯತೆಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು.
ಶಿಕ್ಷಕರ ಕುಂದು ಕೊರತೆಯಗಳನ್ನು ಪಟ್ಟಿ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದು ಇತ್ಯರ್ಥಕ್ಕೆ ಪ್ರಯತ್ನ ಮಾಡುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿದ್ದಪ್ಪ ಭರವಸೆ ನೀಡಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಸಮಿತಿಗೆ ನಾಮನಿರ್ದೇಶಿತ ಸದಸ್ಯರನ್ನು ಅಯ್ಕೆ ಮಾಡಿ ಸಂಘದ ಕಾರ್ಯದರ್ಶಿ ಸಿ.ವೆಂಕಟರಾಯಪ್ಪ ಪ್ರಮಾಣಪತ್ರ ನೀಡಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್, ಖಜಾಂಚಿ ಪಿಳ್ಳಣ್ಣ, ಕ್ಷೇತ್ರ ಸಮನ್ವಯ ಅಧಿಕಾರಿ ವೆಂಕಟರಾಮ್, ಪದಾಧಿಕಾರಿಗಳಾದ ಫಯಾಜ್ ಅಹ್ಮದ್, ಕದಿರಪ್ಪ, ಪ್ರಭಾವತಿ, ವರುಣ್, ಆಂಜನೇಯಲು ಮತ್ತಿತರರು ಇದ್ದರು.
ನಾಮ ನಿರ್ದೇಶನ ಸದಸ್ಯರ: ಎಸ್.ವೇಣು(ಗೌರವಾಧ್ಯಕ್ಷ), ಎ.ಪದ್ಮಾವತಿ ಮತ್ತು ಎಂ.ಬಾವಾಜಾನ್(ಉಪಾಧ್ಯಕ್ಷರು), ಸಿ.ಎನ್.ವಿಜಯಕುಮಾರ್ ಮತ್ತು ಸರಸ್ವತಮ್ಮ (ಸಂಘಟನಾ ಕಾರ್ಯದರ್ಶಿಗಳು), ಎಂ.ಶ್ರೀರಾಮ ಮತ್ತು ಶಹಜಾನ್(ಸಹ ಕಾರ್ಯದರ್ಶಿಗಳು), ಎನ್.ಶಿವಪ್ಪ (ಲೆಕ್ಕಪರಿಶೋಧಕ), ವೆಂಕಟರೆಡ್ಡಿ ಮತ್ತು ಅಂಜಿನಪ್ಪ(ಕಾರ್ಯಕಾರಿ ಸಮಿತಿ ಸದಸ್ಯರು) ಅವರನ್ನು ಸಂಘದ ತಾಲೂಕು ಸಮಿತಿಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.