ಜಿಎಸ್‌ಐ ಅಧಿಕಾರಿಗಳ ತಂಡ ಭೇಟಿ

Team visit of GSI officials
Published on

ಮಡಿಕೇರಿ:

ಭಾರತೀಯ ಭೂ ಸರ್ವೇಕ್ಷಣಾ(ಜಿಎಸ್‌ಐ) ಅಧಿಕಾರಿಗಳ ತಂಡ ಮಡಿಕೇರಿ ತಾಲೂಕಿನ ಮದೆನಾಡು, ಕರ್ತೋಜಿ, ಕೊಯನಾಡು ಶಾಲೆ ಮತ್ತಿತರ ಭೂಕುಸಿತ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳಾದ ಸೆಂಥಿಲ್ ಕುಮಾರ್ ಮತ್ತು ಸೋವೆಶ್ ನೇತೃತ್ವದ ತಂಡವು ಭೇಟಿ ನೀಡಿ ಈ ಸ್ಥಳಗಳಲ್ಲಿ ವೀಕ್ಷಣೆ ನಡೆಸಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಹಲವು ಮಾಹಿತಿ ನೀಡಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿಗಳಾದ ರಾಹುಲ್, ಲಾಯಲ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net