ಟೀಮ್ ಶಿವಾಜಿ ತಂಡಕ್ಕೆ ಮಾಸ್ಟರ್ಸ್ ಪುಟ್ಬಾಲ್ ಕಪ್

WINNARS. vpt
ಪಂದ್ಯಾಟದ ಪ್ರಥಮ ಸ್ಥಾನ ಗಳಿಸಿದ್ದ ಟೀಮ್ ಶಿವಾಜಿ .
Published on

ವಿರಾಜಪೇಟೆ : ಪಟ್ಟಣದಲ್ಲಿ ನಡೆದ 50 ವರ್ಷ ಮೇಲ್ಪಟ್ಟವರ ಕೊಡಗು ಮಾಸ್ಟರ್ಸ್ ಫುಟ್‌ಬಾಲ್ ಕಪ್ ಹೊನಲು ಬೆಳಕಿನ ಫುಟ್‌ಬಾಲ್ ಟೂರ್ನಿಯಲ್ಲಿ ಟೀಂ ಶಿವಾಜಿ ತಂಡ ಕೊಡಗು ಮಾಸ್ಟರ್ಸ್ ಫುಟ್‌ಬಾಲ್ ಕಪ್ ತನ್ನದಾಗಿಸಿಕೊಂಡಿತು.

ಪಟ್ಟಣದ ತಾಲೂಕು ಮೈದಾನದಲ್ಲಿ ಭಾನುವಾರ ನಡೆದ ತೀವ್ರ ಹಣಾಹಣಿಯಿಂದ ಕೂಡಿದ ಟೀಂ ಶಿವಾಜಿ ಹಾಗೂ ಸ್ನೇಹಿತರ ಬಳಗ ತಂಡಗಳ ನಡುವಿನ ಫೈನಲ್ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿತು. ನಿಗದಿತ ಅವಧಿಯ ಆಟದಲ್ಲಿ ಉಭಯ ತಂಡಗಳು ಯಾವುದೇ ಗೋಲು ಗಳಿಸದ್ದರಿಂದ ಸಮಬಲ ಸಾಧಿಸಿದವು. ಫಲಿತಾಂಶಕ್ಕಾಗಿ ನಡೆದ ಪೆನಾಲ್ಟಿ ಶೂಟ್ ಔಟ್‌ನಲ್ಲಿ ಕೂಡ ಸಮಬಲ ಸಾಧಿಸಿದವು. ಕೊನೆಯಲ್ಲಿ ವಿಜೇತರನ್ನು ನಿರ್ಧರಿಸಲು ಹಾಕಲಾದ ಟಾಸ್‌ನಲ್ಲಿ ಟೀಂ ಶಿವಾಜಿ ಪ್ರಶಸ್ತಿ ಪಡೆಯಿತು.

ಸ್ನೇಹಿತರ ಬಳಗ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡರೆ, ಬ್ಲ್ಯಾಕ್ ಆ್ಯಂಡ್ ವೈಟ್ ತಂಡ ಮೂರನೇ ಸ್ಥಾನ ಪಡೆದುಕೊಂಡಿತು. ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ನಲ್ಲಿ ಸ್ನೇಹಿತರ ಬಳಗ ತಂಡವು 2-0 ಗೋಲುಗಳಿಂದ ಬ್ಲ್ಯಾಕ್ ಆ್ಯಂಡ್ ವೈಟ್ ತಂಡ ಮಣಿಸಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಶಿವಾಜಿ ತಂಡ ಹಾಗೂ ಜಾಗ್ವಾರ್ ತಂಡಗಳ ನಡುವಿನ ಪಂದ್ಯವು ನಿಗದಿತ ಅವಧಿಯಲ್ಲಿ ಸಮಬಲ ಸಾಧಿಸಿದವು. ಫಲಿತಾಂಶಕ್ಕಾಗಿ ಎರಡು ಬಾರಿ ಪೆನಾಲ್ಟಿ ಶೂಟೌಟ್ ನೀಡಿದರೂ ಉಭಯ ತಂಡಗಳು ಗೋಲು ಗಳಿಸದ ಹಿನ್ನೆಲೆಯಲ್ಲಿ ಪಂದ್ಯ ಸಮಬಲವಾಯಿತು. ಫಲಿತಾಂಶಕ್ಕಾಗಿ ನಡೆದ ಟಾಸ್‌ನಲ್ಲಿ ಟೀಂ ಶಿವಾಜಿ ತಂಡ ಜಯಗಳಿಸಿ ಫೈನಲ್ ಪ್ರವೇಶಿಸಿತು.

ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದವು. ಬ್ಲೂ ಸ್ಟಾರ್ ತಂಡದಲ್ಲಿ ಆಟವಾಡಿದ 74 ವರ್ಷದ ಸತ್ಯನ್, ಟೂರ್ನಿಯಲ್ಲಿ ಭಾಗವಹಿಸಿದ ಹಿರಿಯ ಆಟಗಾರ. ಫೈನಲ್ ಪಂದ್ಯಾಟವು ಟೀಮ್ ಶಿವಾಜಿ ಮತ್ತು ಸ್ನೇಹಿತರ ಬಳಗ ತಂಡಗಳ ಮಧ್ಯೆ ನಡೆಯಿತು. ನಿಗದಿತ ಸಮಯದಲ್ಲಿ ಉಭಯ ತಂಡಗಳು ಗೋಲು ಗಳಿಸದೆ ಸಮಬಲ ಸಾಧಿಸಿದವು. ಬಳಿಕ ಪೆನಾಲ್ಟಿ ಶೂಟ್‌ಔಟ್ ನೀಡಲಾಯಿತು. ಗೋಲು ದಾಖಲಾಗಲಿಲ್ಲ, ಕೊನೆಯಲ್ಲಿ ಆಯೋಜಕರು ಟಾಸ್ ಹಾಕಲಾಯಿತು. ಇದರಲ್ಲಿ ಟೀಮ್ ಶಿವಾಜಿ ತಂಡ ಜಯಗಳಿಸಿತು.

ಟೂರ್ನಿಯಲ್ಲಿ ಹೆಚ್ಚು ಗೋಲು ದಾಖಲಿಸಿದ ಪ್ರಶಸ್ತಿಯನ್ನು ಮರ್ವಿನ್ ಲೋಬೋ, ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಲವೀನ್ ಉತ್ತಪ್ಪ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಸ್ನೇಹಿತರ ಬಳಗ ತಂಡದ ಜಾನ್ಸನ್ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಹಿರಿಯ ಫುಟ್ಬಾಲ್ ಆಟಗಾರ ಎಂ.ಸಿ.ಕಾರ್ಯಪ್ಪ, ಕೊಡಗು ಜಿಲ್ಲಾ ಫುಟ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಅವರನ್ನು ಸನ್ಮಾನಿಸಲಾಯಿತು.

ಸಮಾರೋಪದಲ್ಲಿ ಪುರಸಭೆಯ ಅಧ್ಯಕ್ಷೆ ಎಂ.ಕೆ.ದೇಚಮ್ಮ, ಉಪಾಧ್ಯಕ್ಷೆ ಫಸಿಹ ತಬಸ್ಸುಂ, ಸದಸ್ಯರಾದ ಮಹಮ್ಮದ್ ರಾಫಿ, ಮತ್ತೀನ್, ರಾಜೇಶ್, ಪೃಥ್ವಿನಾಥ್, ಪ್ರಮುಖರಾದ ಸಿ.ಎ.ನಾಸಿರ್, ಹಿರಿಯ ಫುಟ್‌ಬಾಲ್ ಆಟಗಾರ ಎಂ.ಸಿ.ಕಾರ್ಯಪ್ಪ, ಚೆಪ್ಪುಡಿರ ಕಾರ್ಯಪ್ಪ, ರಗ್ಬಿ ಅಂತಾರಾಷ್ಟ್ರೀಯ ಮಾಜಿ ಆಟಗಾರ ಮಾದಂಡ ತಿಮ್ಮಯ್ಯ, ಕೊಡಗು ಮಾಸ್ಟರ್ಸ್ ಫುಟ್‌ಬಾಲ್ ಕಪ್ ಆಯೋಜಕ ತಂಡದ ಅಧ್ಯಕ್ಷ ಭಾಸ್ಕರ್, ಸಿಪಿಐ ಅನೂಪ್ ಮಾದಪ್ಪ, ಉದ್ಯಮಿ ಬಿ.ವಿ.ಹೇಮಂತ್, ಕ್ರೀಡಾಪಟು ಸಚಿನ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ.ಗಣೇಶ್, ಹಿಂದು ಮಲಯಾಳಿ ಸಮಾಜದ ಅಧ್ಯಕ್ಷ ವಿನೂಪ್ ಕುಮಾರ್, ಉದ್ಯಮಿ ಶಕೀಲ್, ವಕೀಲರಾದ ಶ್ರೀನಿವಾಸ್ ಪ್ರಸಾದ್, ಟಿ.ಪಿ. ಕೃಷ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net