

ಧಾರವಾಡ: ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ಡೆಂಘೆಯಿಂದ ಬಾಲಕಿ ಸಾವು ಹಾಗೂ ಶಂಕಿತ 7 ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ತಾಲೂಕು ವೈದ್ಯಾಧಿಕಾರಿ ಡಾ. ಕೆ.ಎನ್. ತನುಜಾ ಹಾಗೂ ಇಲಾಖೆಯ ತಂಡ ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ಸುಮಾರು 21 ಜನ ಆಶಾ ಕಾರ್ಯಕರ್ತೆರು ಗ್ರಾಮದ ಪ್ರತಿ ಮನೆಗೆ ಹೋಗಿ ಆರೋಗ್ಯ ಸಮೀಕ್ಷೆ ಮಾಡಿ, ಡೆಂಘೆ, ಚಿಕೂನ್ ಗುನ್ಯ ತಡೆ ಬಗ್ಗೆ ಜಾಗೃತಿ ಮೂಡಿಸಿದರು. ಜ್ವರ ಪೀಡಿತರ ಓಣಿಗಳಿಗೆ ಭೇಟಿ ನೀಡಿ ಕುಟುಂಬದವರ ಅಭಿಪ್ರಾಯ ಸಂಗ್ರಹಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಕೊಟ್ರಿ, ಉಪಾಧ್ಯಕ್ಷ ವಿಠ್ಠಲ ಬಟ್ಟಂಗಿ, ಪಿಡಿಒ ಪರಶುರಾಮ ಕವಲೂರ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.