

ಬೆಳ್ವೆ: ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕುಂದಾಪುರ ಹಾಗೂ ಬ್ರಹ್ಮಾವರ ತಾಲೂಕಿನ ಇಬ್ಬರು ಮಹಿಳೆಯರ ಶಸ್ತ್ರಚಿಕಿತ್ಸೆಗೆ ಬೆಳ್ವೆಯ ಟೀಮ್ ಮಲೆನಾಡು ಹ್ಯುಮ್ಯಾನಿಟೇರಿಯನ್ ಟ್ರಸ್ಟ್ ವತಿಯಿಂದ ಬುಧವಾರ ಸಹಾಯಧನ ಹಸ್ತಾಂತರಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಮುಸ್ತಾಕ್ ಅಹಮ್ಮದ್, ಬೆಳ್ವೆ ಜುಮಾ ಮಸೀದಿ ಅಧ್ಯಕ್ಷ ಅಹ್ಮದ್ ಬ್ಯಾರಿ, ಮದ್ರಸ ಉಪಾಧ್ಯಕ್ಷ ಅಬ್ದುಲ್ ಬ್ಯಾರಿ, ಸ್ಥಳೀಯರಾದ ಷರೀಫ್ ಸಾಹೇಬ್, ಅಬ್ದುಲ್ ಖಾದರ್ ಸಾಹೇಬ್, ಮೊಹಮ್ಮದ್ ರಯಾನ್ ಬೆಳ್ವೆ ಉಪಸ್ಥಿತರಿದ್ದರು.