ಕಾಸರಗೋಡು: ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ತಂಡವೊಂದು ಪ್ರಯಾಣಿಕನ ಜೇಬಿಂದ 14,500 ರೂ. ನಗದು ಕಸಿದು ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ವಿರುದ್ಧ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮಧೂರು ಪರಕ್ಕಿಲದ ಉದಯ ಕುಮಾರ್ ಪಿ.ಪಿ(62) ಹಣ ಕಳೆದುಕೊಂಡವರು. ಅ.12ರಂದು ಘಟನೆ ನಡೆದಿದ್ದು, ನಿಲ್ದಾಣದಲ್ಲಿ ನಿಂತಿದ್ದ ಉದಯ ಕುಮಾರ್ ಬಳಿ ಬಂದ ಒಬ್ಬಾತ ಕೈಯಲ್ಲಿದ್ದ ಮೊಬೈಲ್ ಕಸಿದು ತೆಗೆದು, ಅದನ್ನು ಹಿಂತಿರುಗಿಸಬೇಕಾದರೆ 500 ರೂ. ನೀಡುವಂತೆ ಬೇಡಿಕೆಯಿರಿಸಿದ್ದಾನೆ. ಅಲ್ಪ ಹೊತ್ತಿನಲ್ಲಿ ಇನ್ನೋರ್ವ ಆಗಮಿಸಿ ಜೇಬಲ್ಲಿದ್ದ 14,500 ರೂ. ನಗದು ಕಸಿದು ದೂಡಿಹಾಕಿದ್ದಾರೆ.