ಬ್ಯಾಡಗಿ ವಕೀಲರ ಎ ತಂಡ ಪ್ರಥಮ

Team A of Byadagi Lawyers is first
Published on

ಬ್ಯಾಡಗಿ: ಇಲ್ಲಿನ ಎಸ್​ಜೆಜೆಎಂ ಕ್ರೀಡಾಂಗಣದಲ್ಲಿ ಸ್ಥಳೀಯ ನ್ಯಾಯವಾದಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಕೀಲರ ಕ್ರಿಕೆಟ್ ಟೂರ್ನಾಮೆಂಟ್​ನಲ್ಲಿ ಬ್ಯಾಡಗಿ ವಕೀಲರ ಎ ತಂಡ ಪ್ರಥಮ ಹಾಗೂ ರಾಣೆಬೆನ್ನೂರ ವಕೀಲರ ತಂಡ ದ್ವಿತೀಯ, ಬ್ಯಾಡಗಿ ನ್ಯಾಯಾಂಗ ಇಲಾಖೆ ತಂಡ ತೃತೀಯ ಸ್ಥಾನ ಪಡೆದವು.

ಬ್ಯಾಡಗಿ ತಂಡಕ್ಕೆ ಟ್ರೋಫಿ ನೀಡಿ ಗೌರವಿಸಲಾಯಿತು. ಜಿಲ್ಲಾ ಸತ್ರ ನ್ಯಾಯಾಧೀಶ ಜಿ.ಎಲ್.ಲಕ್ಷ್ಮೀನಾರಾಯಣ, ಹಿರಿಯ ದಿವಾಣಿ ನ್ಯಾಯಾಧೀಶ ಅಮುಲ್ ಜೆ. ಹಿರೇಕುಡಿ, ಕಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ, ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಮುತಾಲಿಕ ದೇಸಾಯಿ, ವಕೀಲರ ಸಂಘದ ಅಧ್ಯಕ್ಷ ಎಸ್.ಎನ್. ರ್ಬಾ, ಉಪಾಧ್ಯಕ್ಷ ಬಿ.ಜಿ. ಹಿರೇಮಠ, ವಕೀಲರಾದ ಎಂ.ಪಿ. ಹಂಜಗಿ, ಎಫ್.ಎಂ. ಮುಳುಗುಂದ, ಪಿ.ಆರ್. ಮಠದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net