

ಮಂಗಳೂರು : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್ (ಐಐಎಸ್ಇಆರ್) ನಡೆಸಿದ ಅರ್ಹತಾ ಪರೀಕ್ಷೆಯಲ್ಲಿ ಶಾರದಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೆ.ತೇಜಸ್ವಿ ನಾರಾಯಣ ಅಖಿಲ ಭಾರತ ಮಟ್ಟದಲ್ಲಿ 47ನೇ ರ್ಯಾಂಕ್ ಗಳಿಸಿದ್ದಾರೆ. ಇವರು ದೇಶದ ಏಳು ಅತ್ಯುನ್ನತ ಐಐಎಸ್ಇಆರ್ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಐಐಎಸ್ಇ ಬೆಂಗಳೂರು ಹಾಗೂ ಐಐಟಿ ಮದ್ರಾಸ್ನಲ್ಲಿ ಶಿಕ್ಷಣ ಪಡೆಯಲು ಅರ್ಹತೆ ಗಳಿಸಿದ್ದಾರೆ. ಇವರನ್ನು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಬಿ ಪುರಾಣಿಕ್ ಹಾಗೂ ಶಾರದಾ ಪ.ಪೂ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ನಾಯ್ಕ ಅಭಿನಂದಿಸಿದ್ದಾರೆ.