ಮಕ್ಕಳ ಮನಮುಟ್ಟುವಂತಿರಲಿ ಬೋಧನೆ

training
Published on

ಶಿರಹಟ್ಟಿ: ಶಿಕ್ಷಕ ವೃತ್ತಿಯ ಪಾವಿತ್ರ್ಯ ಕಾಪಾಡಿಕೊಂಡು, ಕ್ರಿಯಾಶೀಲರಾಗಿ ಮಕ್ಕಳ ಮನ ಮಟ್ಟುವಂತೆ ಬೋಧನೆ ಮಾಡಬೇಕು. ಸವಾಲುಗಳನ್ನು ಎದುರಿಸಿ ಮಕ್ಕಳ ಕಲಿಕೆಯಲ್ಲಿ ಪ್ರಗತಿ ಕಾಣಬೇಕು ಎಂದು ಬಿಇಒ ಜಿ.ಎಂ. ಮುಂದಿನಮನಿ ಹೇಳಿದರು.

ತಾಲೂಕಿನ ಛಬ್ಬಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಅತಿಥಿ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನಲ್ಲಿ ಶಿಕ್ಷಕರ ಕೊರತೆ ನೀಗಿಸಲು ಪ್ರಸಕ್ತ ವರ್ಷ 111 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಅವರಿಗೆ ತರಬೇತಿ ನೀಡುವ ಮೂಲಕ ಕಲಿಕಾ ಪ್ರಕ್ರಿಯೆಗೆ ಸನ್ನದ್ಧಗೊಳಿಸಲಾಗುತ್ತಿದೆ ಎಂದರು.

ಬಿಆರ್‌ಪಿಗಳಾದ ಐ.ಎಸ್. ಮೆಡ್ಲೇರಿ, ಎಂ.ಎನ್. ಭರಮಗೌಡರ, ಬಿ.ಎಂ. ಯರಗುಪ್ಪಿ, ವಿ.ಎಚ್. ದೀಪಾಳಿ, ಸಿಆರ್‌ಪಿಗಳಾದ ಆರ್. ಮಹಾಂತೇಶ, ಎನ್.ಎನ್. ಸಾವಿರಕುರಿ, ಗೀತಾ ಸರ್ವಿ, ಕೆ.ಪಿ. ಕಂಬಳಿ, ಗಾಯತ್ರಿ ಹಳ್ಳದ, ಸಂಪನ್ಮೂಲ ವ್ಯಕ್ತಿಗಳಾಗಿ ವೈ.ಬಿ. ಪಾಟೀಲ, ವಿ.ಎ.ನರಗುಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net