

ಬೀಳಗಿ:ಶಿಕ್ಷಕ ವೃತ್ತಿಯು ಬಹಳ ಪವಿತ್ರವಾಗಿದ್ದು, ಸಮಾಜವು ಶಿಕರನ್ನು ಕೇವಲ ವಿದ್ಯೆ ಮತ್ತು ಪಠ್ಯಕ್ರಮಗಳ ಕಲಿಕೆಗೆ ಮಾತ್ರ ಸೀಮಿತವಾಗಿ ಗುರುತಿಸುವುದಿಲ್ಲ, ಪ್ರಾಥಮಿಕದಲ್ಲಿ ತಾಯಿಯನ್ನು ಒಂದನೇ ಸ್ಥಾನ. ವಿದ್ಯೆ ನೀಡುವ ಶಿಕರನ್ನು ಎರಡನೇ ಸ್ಥಾನದಲ್ಲಿ ಕಾಣುತ್ತೇವೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯ ಶಾಸಕ ಜೆ.ಟಿ. ಪಾಟೀಲ ಹೇಳಿದರು.
ಸ್ಥಳಿಯ ಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶುಕ್ರವಾರ ೇತ್ರ ಶಿಣ ಇಲಾಖೆ ಹಾಗೂ ತಾಲೂಕು ಶಿಕರ ದಿನೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿ ಅಚರಣೆ ಹಾಗೂ ಶಿಕರ ದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಣ ದುಡ್ಡಿನಿಂದ ಕಟ್ಟುವ ವೃತ್ತಿಯಲ್ಲ. ಮಗುವಿನ ಬೆಳವಣಿಗೆ ಶಿಕರಲ್ಲಿ ಅಂದರೆ ಶಿಕ ವೃತ್ತಿಯಲ್ಲಿ ಯಾರೂ ತಾರತಮ್ಯ ಮಾಡಬೇಡಿ. ನಿಮ್ಮ ಮಕ್ಕಳಂತೆ ಕಂಡು ಅವರನ್ನು ಸಮಾಜ ಮುಖ್ಯವಾಹಿನಿಗೆ ತರಬೇಕು. ಪ್ರಶಸ್ತಿಗಳು ಅವರ ಮಾಡುವ ಕಾಯಕ ಮತ್ತು ನಿಷ್ಠೆಗಳಿಗೆ ಪ್ರಶಸ್ತಿಗಳು ಸಿಕ್ಕರೆ ಯಾವುದೇ ತೊಂದರೆ ಇಲ್ಲ. ಆದರೆ ಜನಪ್ರತಿನಿಧಿಗಳ ಶಿಫಾರಸು ಪತ್ರಗಳ ಮೂಲಕ ಪ್ರಶಸ್ತಿ ಪಡೆಯುವುದು ಸೂಕ್ತವಲ್ಲ ಎಂದರು.
ವಿ.ಪ ಸದಸ್ಯ ಎಚ್.ಆರ್. ನಿರಾಣಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕರ ಪಾತ್ರ ಮಹತ್ವದ್ದು. ಶಿಕರನ್ನು ಗೌರವದಿಂದ ಕಾಣುವ ಸಮಾಜ ನಮ್ಮದಾಗಿದೆ ಎಂದು ತಿಳಿಸಿದರು.ಬಿಇಒ ಆರ್.ಎಸ್. ಆದಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಯಬಾಗ ತಾಲೂಕಿನ ಕಂಕಣವಾಡಿ ಆಧ್ಯಾತ್ಮಿಕ ಚಿಂತಕರಾದ ಮಾರುತಿ ಶರಣರು ವಿಶೇಷ ಉಪನ್ಯಾಸ ನೀಡಿದರು.
ತಹಸೀಲ್ದಾರ ವಿನೋದ ಹತ್ತಳ್ಳಿ, ತಾಪಂ ಪ್ರಭಾರಿ ಇಒ ಶ್ರೀನಿವಾಸ ಪಾಟೀಲ, ಸಿಪಿಐ ಎಚ್.ಬಿ. ಸಣ್ಣಮನಿ, ಪಪಂ ಅಧ್ಯ ಮುತ್ತು ಬೋರ್ಜಿ, ಉಪಾಧ್ಯೆ ಕಲಾವತಿ ಗಡ್ಡದವರ, ಸ್ವಾಗತ ಸಮಿತಿ ಅಧ್ಯ ರಾಜು ಬೋರ್ಜಿ, ಗುರು ಶ್ರೇಷ್ಠ ಪ್ರಶಸ್ತಿ ಪಡೆದ ರವಿಶಂಕರ ಕೆ.ಎನ್., ಬಿಆರ್ಪಿ ಶಿವಾಜಿ ಕಾಂಬಳೆ ಇದ್ದರು.ಬೀಳಗಿ ಸ್ಥಳಿಯ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶಿಕರ ದಿನಾಚರಣೆಯಲ್ಲಿ ನಿವೃತ್ತ ಶಿಕರಿಗೆ ಶಾಸಕ ಜೆ.ಟಿ. ಪಾಟೀಲ ಹಾಗೂ ವಿ.ಪ. ಸದಸ್ಯ ಎಚ್.ಆರ್. ನಿರಾಣಿ ಸನ್ಮಾನಿಸಿದರು. ನಿವೃತ್ತ ಶಿಕರಾದ ಜಿ.ಆರ್. ಹವೇಲಿ, ಬಿ.ಸಿ. ಹೊಸಗೌಡರ, ಎಸ್.ವೈ. ಚಲವಾದಿ ಇದ್ದರು.