

ಮೂಡಲಗಿ: ಶಿಕ್ಷಕರು ಕೇವಲ ಬೋಧಿಸುವುದಷ್ಟೇ ಅಲ್ಲದೇ ವಿದ್ಯಾರ್ಥಿಗಳಲ್ಲಿ ಜ್ಞಾನ, ನೈತಿಕ ಮೌಲ್ಯ ಮತ್ತು ಶಿಸ್ತು ಮೂಡಿಸಿ, ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತಾರೆ ಎಂದು ಪ್ರಾಚಾರ್ಯ ಡಾ.ಸುರೇಶ ಹನಗಂಡಿ ಹೇಳಿದರು.
ಸಮೀಪದ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆ ಪ್ರಥಮದರ್ಜೆ ಕಾಲೇಜಿನ ಐಕ್ಯೂಎಸಿ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿದ್ಯಾರ್ಥಿ ಒಕ್ಕೂಟದ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು, ನಮಗೆ ಮಾರ್ಗದರ್ಶನ ಮಾಡಿದ ಶಿಕ್ಷಕರು ಸ್ಮರಣೀಯ ಎಂದರು.
ಐಕ್ಯೂಎಸಿ ಸಂಯೋಜಕ ಡಾ.ಎಂ.ಬಿ.ಕುಲಮೂರ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ, ಡಾ.ಕೆ.ಎಸ್.ಪರವ್ವಗೋಳ, ವಸುಂಧರಾ ಕಾಳೆ, ಬಿ.ಕೆ.ಸೊಂಟನವರ, ಬಿ.ಬಿ.ವಾಲಿ, ಡಾ.ರಾಜಶ್ರೀ ತೋಟಗಿ, ಆರ್.ಎಸ್.ಪಂಡಿತ, ವಿಲಾಸ ಕೆಳಗಡೆ, ಬಿ.ಸಿ.ಮಾಳಿ, ಸಂತೋಷ ಬಂಡಿ, ಎಂ.ಬಿ.ಜಾಲಗಾರ, ಮಲ್ಲಪ್ಪ ಕರಗಣ್ಣಿ, ಮಲ್ಲಪ್ಪ ಮುರಗೋಡ, ಸಾಗರ ಐದಮನಿ, ನಿರಂಜನ ಪಾಟೀಲ, ಬಿ.ಎಂ.ಶೀಗಿಹಳ್ಳಿ, ಮಂಜುನಾಥ ಗೋರಗುದ್ದಿ ಇತರರಿದ್ದರು. ಲಕ್ಷ್ಮೀ ಕಲ್ಲೋಳಿ ನಿರೂಪಿಸಿದರು. ರಾಧಿಕಾ ಕರೆವ್ವಗೋಳ ಪ್ರಾರ್ಥಿಸಿದರು. ಸಂಜು ಘೋಡಗೇರಿ ಸ್ವಾಗತಿಸಿದರು. ಸುಪ್ರಿಯಾ ಕಡಲಗಿ ವಂದಿಸಿದರು.