ಬೋಧನೆ ಜತೆಗೆ ಸಂಶೋಧನೆಯಲ್ಲಿ ತೊಡಗಿ

11ckd3-Web
ಚಿಕ್ಕೋಡಿಯ ಬಿ.ಕೆ.ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಡಾ. ಚಂದ್ರಕಾಂತ ಕೊಕಾಟೆ ಉದ್ಘಾಟಿಸಿದರು. ಡಾ. ಎಂ.ಟಿ. ಕುರಣಿ, ಉದಯಸಿಂಗ ರಾಜಪುತ, ಎನ್.ಆರ್. ಬಿರಸಾಲ ಇತರರು ಇದ್ದರು.
Published on

ಚಿಕ್ಕೋಡಿ: ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಜತೆಗೆ ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕು. ಸಂಶೋಧನೆಗಳು ಮನುಷ್ಯನ ವಿಚಾರಗಳನ್ನು ಜಗತ್ತಿಗೆ ಪರಿಚಯಿಸುತ್ತದೆ ಎಂದು ಕೆಎಲ್‌ಇ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ.ಚಂದ್ರಕಾಂತ ಕೊಕಾಟೆ ಹೇಳಿದ್ದಾರೆ.

ಪಟ್ಟಣದ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಬಿ.ಕೆ. ಕಾಲೇಜಿನಲ್ಲಿ ಗುಣಮಟ್ಟ ವರ್ಧನೆಗೆ ಶೈಕ್ಷಣಿಕ ಪೂರಕಗಳು ಎಂಬ ವಿಷಯ ಕುರಿತು ಬುಧವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಮಹಾವಿದ್ಯಾಲಯಗಳ ಹಿರಿಯ ಶಿಕ್ಷಕರು ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಂಡು ಜಾಗತಿಕ ಮಟ್ಟದ ಬೋಧನೆ ಮಾಡಲು ಪ್ರಯತ್ನಿಸಬೇಕು. ಉನ್ನತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ವಿದ್ಯಾರ್ಥಿಗಳನ್ನು ಕೇವಲ ಶೈಕ್ಷಣಿಕ ವಿಷಯಗಳಿಗೆ ಮಾತ್ರ ಸೀಮಿತ ಮಾಡಬಾರದು. ಮಕ್ಕಳನ್ನು ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳಲ್ಲಿ ಕೌಶಲ ಗುರುತಿಸಿ ಅವರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಗೋವಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ರಾಮಬಲ್ಲವ ರಾಯ್ ಅವರು ಮಹಾವಿದ್ಯಾಲಯಗಳಲ್ಲಿ ಬೋಧನೆ ಹಾಗೂ ಕಲಿಕಾ ಪ್ರಕ್ರಿಯೆಗಳು ಕುರಿತು ಹಾಗೂ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಟಿ.ಸಿ. ತಾರಾನಾಥ ಅವರು ಪರಿಸರ ಪ್ರಜ್ಞೆ ಮತ್ತು ಹಸಿರು ಪರಿಶೋಧನೆ ಕುರಿತು ಉಪನ್ಯಾಸ ನೀಡಿದರು. ಪ್ರಾಚಾರ್ಯ ಉದಯಸಿಂಗ ರಾಜಪುತ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಎನ್.ಆರ್. ಬಿರಸಾಲ ಪರಿಚಯಿಸಿದರು. ಡಾ. ಎಂ.ಟಿ. ಕುರಣಿ ಸ್ವಾಗತಿಸಿದರು. ಪದ್ಮಶ್ರೀ ಚೌಗಲಾ ಪ್ರಾರ್ಥನಾಗೀತೆ ಹಾಡಿದರು. ಉಮೇಶ ನೀಲಪ್ಪನವರ ಹಾಗೂ ಸೌಮ್ಯಾ ದೇಸಾಯಿ ನಿರೂಪಿಸಿದರು. ಸಂಯೋಜಕ ಡಾ.ಎಂ.ಎಂ. ಹುರಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net