ಮಕ್ಕಳಿಗೆ ನೀತಿ ಪಾಠ ಬೋಧನೆ

PATA BHODHANE
Published on

ಭಟ್ಕಳ: ಬೆಳಗಾವಿಯ ಮಾಹೇಶ್ವರಿ ಅಂಧ ಶಾಲೆಗೆ ಗೋಕರ್ಣ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಭೇಟಿ ನೀಡಿ ಮಕ್ಕಳಿಗೆ ನೀತಿ ಪಾಠ ಬೋಧಿಸಿದರು.

ಬೆಳಗಾವಿಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆಗೆ ಭೇಟಿ ನೀಡಿದ ಸ್ವಾಮೀಜಿ ಮಕ್ಕಳ ಕುರಿತು ವಿಶೇಷ ಕಾಳಜಿ ವ್ಯಕ್ತಪಡಿಸಿ ಆಶೀರ್ವದಿಸಿದರು. ಬಳಿಕ 150 ವಿದ್ಯಾರ್ಥಿಗಳಿಗೆ ಬಾದಾಮಿ ಬಿಸ್ಕತ್ ಮತ್ತು ನ್ಯಾಚುರಲ್ ಐಸ್ ಕ್ರೀಮ್ ಟಬ್ ನೀಡಿ ಆಶೀರ್ವದಿಸಿದರು. ಶ್ರೀಗಳೊಂದಿಗೆ ವೈದಿಕ ವೃಂದ, ಜಿಎಸ್​ಬಿ ಸಮಾಜದ ಪ್ರಮುಖರು ಸೇರಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net